Home » 27. ಬೇಕಾದ್ದನ್ನು ಪಡೆಯುವ ಶಕ್ತಿ
 

27. ಬೇಕಾದ್ದನ್ನು ಪಡೆಯುವ ಶಕ್ತಿ

by Kundapur Xpress
Spread the love

27. ಬೇಕಾದ್ದನ್ನು ಪಡೆಯುವ ಶಕ್ತಿ
‘ನನಗೆ ಬೇಕಾದ್ದನ್ನು ನಾನು ಪಡೆಯಬಲ್ಲೆ’ ಎಂಬ ಮಾತನ್ನು ಇಂದಿನ ಯುವಕರ ಮುಂದೆ ಹೇಳಿ ನೋಡಿ. ಅವರಿಂದ ಸಿಗುವ ಪ್ರತಿಕ್ರಿಯೆ ಏನು? ‘ಅದೇನು ಮಹಾ, ಒಂದು ಸಿಗರೇಟ್ ಸೇದಿದರೆ ಸಾಕು, ನನಗೆ ಬೇಕಾದ್ದನ್ನು ನಾನು ಪಡೆಯಬಲ್ಲೆ’ ಎಂಬ ಉತ್ತರ ಥಟ್ಟನೆ ಕೇಳಿ ಬರುತ್ತದೆ. ನಮಗೆ ನಮ್ಮ ಮೇಲೆ ಯಾವ ವಿಶ್ವಾಸವೂ ಉಳಿದಿಲ್ಲ. ದೇಹಕ್ಕೆ ಕ್ಷಣಮಾತ್ರದಲ್ಲಿ ಉತ್ತೇಜನ ಕೊಡುವಂತಹ ಪದಾರ್ಥಗಳನ್ನು ನಾವು ಅವಲಂಬಿಸುತ್ತೇವೆ. ಅದು ಬೀಡಿ, ಸಿಗರೇಟು ಇರಬಹುದು. ತಂಬಾಕು ಇರಬಹುದು. ಅಥವಾ ಈಗಿನ ಹುಡುಗರಿಗೆ ಅನಿವಾರ್ಯವಗಿರುವ ಜರ್ದಾ ಕೂಡ ಆಗಬಹುದು. ಅಂತೂ ದೇಹದ ಚೈತನ್ಯವನ್ನು ಥಟ್ಟನೆ ಉದ್ದೀಪಿಸುವಂತಹ ವಸ್ತುವಿನಲ್ಲೇ ನಮಗೆ ವಿಶ್ವಾಸ. ನಮ್ಮ ಸಾಮಥ್ರ್ಯದ ಕುರಿತಾಗಿ ನಮಗೆ ಏನೂ ತಿಳಿದಿಲ್ಲ. ಹೀಗೆ ಹೇಳುವಾಗ ಸಣ್ಣ ಕತೆಯೊಂದು ಇಲ್ಲಿ ನೆನಪಿಗೆ ಬರುತ್ತದೆ. ಮನುಷ್ಯರು ತಮಗೆ ಬೇಕಾದದ್ದನ್ನೆಲ್ಲ ಪಡೆಯುವ ಶಕ್ತಿಯನ್ನು ಅವರಿಗೆ ಸುಲಭದಲ್ಲಿ ಸಿಗದಂತೆ ಎಲ್ಲಿ ಅಡಗಿಸಿಡೋಣ ಎಂಬ ಬಗ್ಗೆ ದೇವ-ದೇವತೆಯರಲ್ಲಿ ಒಮ್ಮೆ ಬಿರುಸಿನ ಚರ್ಚೆಯಾಯಿತಂತೆ. ಕೆಲವು ದೇವತೆಯರು ಆ ಶಕ್ತಿಯನ್ನು ಸಾಗರ ಗರ್ಭದಲ್ಲಿ ಅಡಗಿಸಿಸೋಣ ಎಂದರಂತೆ. ಕೊನೆಗೆ ಆ ಶಕ್ತಿಯನ್ನು ಮನುಷ್ಯರ ಮನಸ್ಸಿನಾಳದಲ್ಲೇ ಅಡಗಿಸಿಡೋಣ, ಆ ಬಗ್ಗೆ ಅವರಿಗೆ ಒಂದಿನಿತೂ ಸಂದೇಹ ಉಂಟಾಗದು ಎಂಬ ಅಭಿಪ್ರಾಯಕ್ಕೆ ಬರಲಾಯಿತಂತೆ. ಮನುಷ್ಯನ ಇಂದ್ರಿಯಗಳು ಬಹಿರ್ಮುಖಿಯಾಗಿರುವುದರಿಂದ ಆತನ ಆಕರ್ಷಣೆಗಳೆಲ್ಲ ಹೊರಜಗತ್ತಿನಲ್ಲೇ ಇದ್ದು ಬಿಡುವುದು ಸಹಜವೇ ಆಗಿದೆ. ಹಾಗಾಗಿಯೇ ಆತನಿಗೆ ತನ್ನ ಆಂತರ್ಯದೊಳಗಿನ ಶಕ್ತಿಯ ಪರಿಚಯ ಎಂದೂ ಆಗದು.

   

Related Articles

error: Content is protected !!