Home » ಆಸೆಗಳ ತ್ಯಾಗ
 

ಆಸೆಗಳ ತ್ಯಾಗ

by Kundapur Xpress
Spread the love

ನಾವು ಯಾವತ್ತೂ ಕೈಗೊಳ್ಳುವ ಕೆಲಸ-ಕಾರ್ಯಗಳಲ್ಲಿ ನಮ್ಮ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳಲು ನಾವದಕ್ಕೆ ಕರ್ತವ್ಯದ ಲೇಪವನ್ನು ಕೊಡುವುದು ರೂಢಿ. ಕರ್ತವ್ಯದ ಲೇಪವನ್ನು ಕೊಡುವ ಮೂಲಕ ನಾವು ಕೈಗೊಂಡ ಕೆಲಸ-ಕಾರ್ಯಗಳಿಗೆ ಪರೋಕ್ಷವಾಗಿ ನಾವು ಕರ್ತೃತ್ವದ ಅಹಮಿಕೆಯನ್ನು ತಾಳುತ್ತೇವೆ. ನನ್ನ ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆ, ಹೆಚ್ಚುಗಾರಿಕೆಯಿಂದ ನಾನು ಆ ಕಾರ್ಯವನ್ನು ಕೈಗೊಂಡೆನೆಂದು ಹೇಳುವುದನ್ನೇ ಮತ್ತೊಂದು ಅರ್ಥದಲ್ಲಿ ‘ನಾನದನ್ನು ಕರ್ತವ್ಯ’ವೆಂದೇ ತಿಳಿದು ಮಾಡಿದೆ ಬಳಿಕ ಮತ್ತೆ ದುಃಖದ ಮಡಿಲಿಗೆ ನಾವು ಜಾರುತ್ತೇವೆ! ಎಂಬ ಅರ್ಥದಲ್ಲಿ ಹೇಳಿಕೊಳ್ಳುವುದು ಸಾಮಾನ್ಯ. ನಮ್ಮ ಕರ್ಮಗಳಿಗೆ ‘ಕರ್ತವ್ಯ’ದ ಕವಚವನ್ನು ತೊಡಿಸುವ ಮೂಲಕ ನಾವು ತೋರಿಕೆಯಲ್ಲಿ ನಿಸ್ವಾರ್ಥವನ್ನು ಮರೆಯಲು ಪ್ರಯತ್ನಿಸುವುದಲ್ಲದೆ ಬೇರೇನೂ ಅಲ್ಲ. ಅದಕ್ಕೆಂದೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ನಿಮ್ಮ ಕರ್ಮಗಳನ್ನು ನಿರ್ವಹಿಸಿದ ಮಾತ್ರಕ್ಕೆ ನಿಮ್ಮಿಂದ ಈ ಪ್ರಪಂಚಕ್ಕೆ ಸಹಾಯವಾಯಿತೆಂಬ ಭ್ರಮೆಯನ್ನು ಬೆಳೆಸಿಕೊಳ್ಳಬೇಡಿ. ಈ ಪ್ರಪಂಚವು ಹಿಂದೆ ಹೇಗಿತ್ತೋ ಇಂದು ಕೂಡ ಹಾಗೆಯೇ ಇದೆ; ಮುಂದೆಯೂ ಅದು ಹಾಗೆಯೇ ಇರುವುದು. ಇಂತಹ ಪ್ರಪಂಚಕ್ಕಾಗಿ ಏನೋ ಸ್ವಲ್ಪ ಒಳ್ಳೆಯದನ್ನು ಮಾಡುವ ಅವಕಾಶ ನಮಗೆ ಒದಗಿತೆಂಬ ಭಾವನೆಯನ್ನು ನಾವು ಬೆಳೆಸಿಕೊಳ್ಳುವುದು ಉತ್ತಮ. ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸುವುದು ಕೂಡ ಇದನ್ನೇ: ಈಶ್ವರನಲ್ಲಿ ಭಕ್ತಿ, ದೇವತೆಗಳ ಪೂಜೆ, ಮಾತಾ-ಪಿತಾದಿ ಹಿರಿಯರ ಸೇವೆ, ಯಜ್ಞ, ದಾನ, ತಪಸ್ಸು, ಗೃಹಕೃತ್ಯ, ಶರೀರ ಸಂಬಂಧೀ ಊಟ-ಉಪಚಾರ ಮುಂತಾದ ಎಲ್ಲ ಕರ್ಮಗಳಲ್ಲಿ ಆಸೆಯನ್ನು ತ್ಯಾಗ ಮಾಡುವುದರಲ್ಲಿಯೇ ಭಗವತ್ ಪ್ರೀತಿಯನ್ನು ಪಡೆಯಬೇಕು! ಆದರೆ ನಾವು ಸ್ವಭಾವತಃ ಕರ್ಮಫಲಾಪೇಕ್ಷಿಗಳು. ದೇವರ ಆರಾಧನೆಯಿಂದ ತೊಡಗಿ ಸಮಾಜದಲ್ಲಿ ಇತರರಿಗೆ ಸಹಾಯ ಮಾಡುವವರೆಗಿನ ಎಲ್ಲ ಕರ್ಮಗಳಿಗೆ ನಾವು ಫಲವನ್ನು ಬಯಸುತ್ತೇವೆ. ಆದರೆ ಹಾಗೆ ಫಲವನ್ನು ಪಡೆದು ಆನಂದಿಸಿದ ಬಳಿಕ ಮತ್ತೆ ದುಃಖದ ಮಡಿಲಿಗೆ ನಾವು ಜಾರುತ್ತೇವೆ!

   

Related Articles

error: Content is protected !!