Home » ಇದುವೇ ಜೀವನ!
 

ಇದುವೇ ಜೀವನ!

by Kundapur Xpress
Spread the love

ಬಾಹ್ಯ ಜಗತ್ತಿನ ಆಕರ್ಷಣೆಯಲ್ಲೇ ನಮ್ಮ ದುಃಖದ ಮೂಲವಿದೆ ಎಂದು ನಮಗೆ ಅನ್ನಿಸುವುದು ಸಹಜವೇ. ಆದರೆ ಅಂತಹ ಅನ್ನಿಸಿಕೆ ಮೇಲ್ನೋಟಕ್ಕೆ ಮಾತ್ರ ನಿಜ. ಯಾವುದೇ ಒಂದು ವಸ್ತುವನ್ನು ಕಾಣುವ ಹತ್ತು ಜನರ ಅಭಿಪ್ರಾಯವು ಹತ್ತು ತೆರನಾಗಿರುವುದಕ್ಕೆ ಆ ವಸ್ತುವು ಕಾರಣವಲ್ಲ ಅಥವಾ ಅದರ ಮೂಲ ಸ್ವರೂಪದಲ್ಲೇ ದೋಷ ಉಂಟೆಂದೂ ಸ್ವಭಾವ, ಗುಣದೋಷ, ಹೇಳುವಂತಿಲ್ಲ. ಆ ವಸ್ತುವನ್ನು ಕಾಣುವ ಹತ್ತು ಮಂದಿಯ ಅಭಿರುಚಿ ಎಲ್ಲವೂ ಆ ವಸ್ತುವನ್ನು ಅವರವರು ಗ್ರಹಿಸುವುದರಲ್ಲಿ ಮುಖ್ಯವಾಗುತ್ತದೆ.  ಸಂದರ್ಭಾನುಸಾರವಾಗಿ ತಮ್ಮ ಅಸಮತೆಯ ಅಭಿವ್ಯಕ್ತಿಯ ಫಲ. ಅದುವೇ ನಮಗೆ ಜೀವನವಾಗಿ ಕಾಣುವುದು! ನಮ್ಮಲ್ಲಿನ ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ ಗುಣಗಳು ಪ್ರಾಬಲ್ಯವನ್ನು ಮೆರೆಯುತ್ತವೆ. ಬಾಹ್ಯ ಜಗತ್ತಿನ ಆಕರ್ಷಣೆಗೆ ನಾವು ಬಲಿಯಾಗುವುದು ನಮ್ಮ ಸ್ವಭಾವ, ಅಭಿರುಚಿ, ಗುಣದೋಷಗಳ ಫಲವಾಗಿಯೇ ಹೊರತು ಹೊರ ಜಗತ್ತಿನ ವಸ್ತುಗಳಿಂದಲ್ಲ; ವಿದ್ಯಮಾನಗಳಿಂದಲ್ಲ, ಒಂದು ದೊಡ್ಡ ಬೆಟ್ಟವನ್ನೇರಿ ನಿಂತು ಆ ಬೆಟ್ಟದ ಬುಡದಲ್ಲಿರುವ ಪಟ್ಟಣವನ್ನೊಮ್ಮೆ ನೋಡಿದಾಗ ನಮಗೆ ಆಗುವ ಅನುಭವವೇನು? ಆ ಪಟ್ಟಣ ಸಂಪೂರ್ಣ ಸಬ್ಬ, ಶಾಂತ, ಸುಂದರವಾಗಿ ಕಾಣುವುದ? ಆ ಪಟ್ಟಣ ವಾಸಿಗಳ ಬದುಕು, ಅವರ ಜಂಜಡ, ಹೋರಾಟ, ಕಷ್ಟ-ಸುಖ ಇತ್ಯಾದಿ ಯಾವುದೂ ನಮಗೆ ಬೆಟ್ಟದ ಮೇಲೆ ನಿಂತು ನೋಡುವಾಗ ಗೋಚರವಾಗದು. ಅದು ಗೋಚರವಾಗಬೇಕಿದ್ದರೆ ನಾವು ಆ ಪಟ್ಟಣವನ್ನು ಪ್ರವೇಶಿಸಬೇಕು! ನಾವಿರುವ ಸೃಷ್ಟಿ ಕೂಡ ಹಾಗೆಯೇ. ಅದರಿಂದ ದೂರವಿದ್ದಾಗ ನಮ್ಮ ಪಾಲಿಗೆ ಅದು ನಿರ್ಜೀವ ನಾವು ಅದನ್ನು ಪ್ರವೇಶಿಸಿದೊಡನೆಯೇ ನಮ್ಮ ಪಂಚೇಂದ್ರಿಯಗಳ ಪ್ರತಿಸ್ಪಂದನದಿಂದ ಅದರಲ್ಲಿ ಜೀವಂತಿಕೆ ತುಂಬಿಕೊಂಡಿರುವುದು ನಮ್ಮ ಅನುಭವಕ್ಕೆ ಬರುವುದು. ಮಾತ್ರವಲ್ಲ ಅದಕ್ಕೆ ಜೀವ ತುಂಬುವ ನಾವೇ ಕೊನೆಗೆ ಅದರ ಜೀವಂತಿಕೆ ಎಂಬ ಮಾಯೆಗೆ ಬೆದರಿ ಓಡಲಾರಂಭಿಸುವೆವು ! ನಮ್ಮ ಬದುಕಿನಲ್ಲಿ ನಾವು ಅನುಭವಿಸುವ ಸುಖ-ದುಃಖಗಳು, ನೋವು-ನಲಿವುಗಳು ಎಲ್ಲವೂ ನಮ್ಮೊಳಗಿನ ಅಸಮತೆಯ ಅಭಿವ್ಯಕ್ತಿಯ ಫಲ. ಅದುವೇ ನಮಗೆ ಜೀವನವಾಗಿ ಕಾಣುವುದು!

 

   

Related Articles

error: Content is protected !!