Home » ಪ್ರಭುತ್ವ ಸಾಧಿಸೋಣ
 

ಪ್ರಭುತ್ವ ಸಾಧಿಸೋಣ

by Kundapur Xpress
Spread the love

ಪ್ರಭುತ್ವ ಸಾಧಿಸೋಣ

ಸೂಕ್ಷ್ಮವಾಗಿ ನೋಡಿದರೆ ಮನಸ್ಸು ಅವಿಧೇಯ ವಿದ್ಯಾರ್ಥಿಯೂ ಹೌದು, ವಿಧೇಯ ವಿದ್ಯಾರ್ಥಿಯೂ ಹೌದು. ಅದರ ಅವಿಧೇಯತೆಗೆ ಮಾತ್ರ ನಾವೇ ಕಾರಣ, ಹೊರತು ಸ್ವತಃ ಅದಲ್ಲ. ಮನಸ್ಸಿನ ಮೇಲೆ ನಾವು ಪ್ರಭುತ್ವ ಪಡೆಯದಿದ್ದರೆ ಅದುವೇ ನಮ್ಮ ಮೇಲೆ ಪ್ರಭುತ್ವವನ್ನು ಸಾರುತ್ತದೆ. ನಾವು ಸದರ ಗುಲಾಮರಾಗಿ ಬಾಳುತ್ತೇವೆ. ನಮ್ಮ ದಿನನಿತ್ಯದ ಎಷ್ಟೋ ಕೆಲಸಗಳಲ್ಲಿ, ಚಟುವಟಿಕೆಗಳಲ್ಲಿ ನಮ್ಮ ಮೇಲೆ ನಮ್ಮ ಮನಸ್ಸಿನ ಪ್ರಭುತ್ವ ಇರುವುದನ್ನು ನಾವು ಅನುಭವದಿಂದ ತಿಳಿಯುತ್ತೇವೆ. ಜತೆಗೆ ಅದರ ಪೀಡನೆಗೂ ಬಲಿಯಾಗುತ್ತೇವೆ. ‘ಇವತ್ತು ನಾನು ಎಣಿಸಿದ್ದೇ ಒಂದು, ಮಾಡಿದ್ದೇ ಬೇರೊಂದು……..’ ಎಂದು ದಿನಂಪ್ರತಿ ಕರುಬುತ್ತಿರುತ್ತೇವೆ. ಯಾಕೆ ಹೀಗೆ? ನಾವು ನಮ್ಮ ಮನಸ್ಸಿನ ಗುಲಾಮರಾಗಿರುವುದೇ ಇದಕ್ಕೆ ಕಾರಣವೇ ವಿನಾ ಬೇರೇನೂ ಅಲ್ಲ. ಹಸಿವೆ ಇಲ್ಲದಿದ್ದರೂ ತಿನ್ನುವ ಚಪಲದಲ್ಲಿ ಅನಗತ್ಯವಾಗಿ ಹೊಟ್ಟೆಯನ್ನು ಗೋಣಿಚೀಲದಂತೆ ತುಂಬುತ್ತೇವೆ. ಹಾಗೆಯೇ ದೈಹಿಕ, ಮಾನಸಿಕ ಅನಾರೋಗ್ಯಕ್ಕೂ ನಮ್ಮನ್ನು ಗುರಿಮಾಡಿಕೊಳ್ಳುತ್ತೇವೆ. ನಮ್ಮ ಎಷ್ಟೋ ದೈಹಿಕ ತೊಂದರೆಗಳಿಗೆ, ರೋಗ ರುಜಿನಗಳಿಗೆ ಅನಿಯಂತ್ರಿತ ಮನಸ್ಸು ಕಾರಣವೇ ವಿನ ಸ್ವತಃ ದೇಹವಲ್ಲ! ಮನಸ್ಸಿನೊಳಗೆ ಯೌವನವೂ ಇದೆ, ವೃದ್ಧಾಪ್ಯವೂ ಇದೆ. ನಮ್ಮ ಮನಸ್ಸು ಹೇಗೋ ಹಾಗೆ ನಾವು! ಆದರೆ ಮನಸ್ಸಿನ ಮೇಲೆ ನಾವು ಪ್ರಭುತ್ವವನ್ನು ಹೊಂದುವುದು ಹೇಗೆ? ನಮ್ಮ ಆಜ್ಞಾನುಸಾರ ಅದು ನಡೆದುಕೊಳ್ಳುವಂತೆ ಮಾಡುವುದು ಹೇಗೆ? ಕಾಮನೆಗಳಿಂದಲೇ ತುಂಬಿರುವ ಮನಸ್ಸೆಂಬ ಉಗ್ರಾಣವನ್ನು ದಿನಂಪ್ರತಿ ಎಂಬಂತೆ ಸ್ವಲ್ಪ ಸ್ವಲ್ಪ ಬರಿದು ಮಾಡುವ ಪ್ರಯತ್ನವನು ಧ್ಯಾನದಿಂದ ನಡೆಸುವುದೇ ಇದಕ್ಕಿರುವ ಉಪಾಯ.

   

Related Articles

error: Content is protected !!