Home » ಶ್ರೇಷ್ಠ ಗುರು
 

ಶ್ರೇಷ್ಠ ಗುರು

by Kundapur Xpress
Spread the love

‘ನಮ್ಮನ್ನು ಯಾರು ಸಿಟ್ಟಿಗೆಬ್ಬಿಸುವರೋ ಅವರೇ ನಮ್ಮನ್ನು ಆಳುತ್ತಾರೆ’ ಎಂಬ ಮಾತೊಂದು ಇದೆ, ಎಂದರೆ ಸುಲಭದಲ್ಲಿ ಸಿಟ್ಟಿಗೇಳುವ ಪ್ರವೃತ್ತಿ ಇರುವ ನಾವು ವಸ್ತುತಃ ನಮ್ಮನ್ನು ಸಿಟ್ಟಿಗೆಬ್ಬಿಸುವವರ ಕೈಗೊಂಬೆಯಾಗಿಯೇ ವರ್ತಿಸುತ್ತಿರುತ್ತೇವೆ ಎಂದಂತಾಯಿತು. ಆದುದರಿಂದ ಸಿಟ್ಟಿಗೇಳುವುದರ ಪರಿಣಾಮವೆಂದರೆ ನಾವು ನಮ್ಮ ಸ್ವಾತಂತ್ರ, ಸ್ವಚ್ಛಂದತೆ, ಮತ್ತು ಮನಸ್ಸಿನ ಶಾಂತಿಯನ್ನು ಕಳೆದುಕೊಂಡತೆಯೇ ಸರಿ. ಹಾಗೆ ಆಗಬಾರದೆಂದಿದ್ದರೆ ನಾವು ಸುಲಭದಲ್ಲಿ ಸಿಟ್ಟಿಗೇಳಕೂಡದು ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಸಿಟ್ಟು ಉಂಟುಮಾಡುವ ದುಷ್ಪಭಾವವನ್ನು ಅರಿಯಲು ನಾವು ವಿಜ್ಞಾನಿ ಅಥವಾ ಸಂಶೋಧಕರಾಗಬೇಕೆಂದೇನೂ ಇಲ್ಲ ಎಂದು ಸ್ವಾಮಿ ಚೈತನ್ಯ ಮಹಾಪ್ರಭುಗಳು ನಮ್ಮನ್ನು ಎಚ್ಚರಿಸುತ್ತಾರೆ. ಇದಕ್ಕೆ ಸ್ವಲ್ಪ ಮಟ್ಟಿನ ಮನಸ್ಸಿನ ಸಿಮಿತವನ್ನು ಬೆಳೆಸಿಕೊಂಡರಷ್ಟೇ ಸಾಕು. ಸಿಟ್ಟು ಮತ್ತು ಉದ್ವಿಗ್ನತೆಗೆ ಗುರಿಯಾದವರ ಬಳಿ ಸ್ವಲ್ಪ ಹೊತ್ತು ನಿಂತರೂ ಸಾಕು; ಅವರ ದೇಹದಿಂದ ಹೊರಡುವ ಅಹಿತಕರ ಗಂಧ ಕೂಡಲೇ ನಮ್ಮ ಮೂಗಿಗೆ ಬಡಿಯುತ್ತದೆ. ಸಿಟ್ಟಿನ ಭರದಲ್ಲಿ ಅವರ ದೇಹದಲ್ಲಾಗುವ ಕಂಪನವು ಸಮೀಪದಲ್ಲಿರುವವರ ಮೇಲೂ ಕಂಪನಗಳನ್ನು ಉಂಟುಮಾಡುತ್ತದೆ. ಮಾತ್ರವಲ್ಲ ಅವರಲ್ಲಿಯೂ ಉದ್ವಿಗ್ನತೆ ಹಾಗೂ ತಾಪವನ್ನು ಸೃಷ್ಟಿಮಾಡುತ್ತದೆ. ಆದರೆ ಶಾಂತಚಿತ್ತರಾಗಿರುವವರ ಬಳಿ ನಿಂತಾಗ ನಮ್ಮ ಮನಸ್ಸು ಕೂಡ ಅದರಿಂದ ಉತ್ತಮ ರೀತಿಯಲ್ಲಿ ಪ್ರಭಾವಿತವಾಗುತ್ತದೆ. ಹಾಗೆಯೇ ಧ್ಯಾನದಲ್ಲಿ ತೊಡಗಿದವರ ಸನಿಹದಲ್ಲಿದ್ದರೆ ನಮ್ಮ ಮನಸೂ ಧ್ಯಾನಾಸಕ್ತವಾಗುತ್ತದೆ. ನಮ್ಮನ್ನು ಯಾವುದೋ ಒಂದು ಅವ್ಯಕ್ತ ಶಕ್ತಿ ಮೇಲಕ್ಕೆ ಎತ್ತಿಕೊಳ್ಳುತ್ತಿರುವಂತಹ ಅನುಭವವಾಗುತ್ತದೆ. ದೇಹ ಮತ್ತು ಮನಸ್ಸಿಗೆ ಹಿತವಾದ ಅನುಭವ ದೊರಕುತ್ತದೆ. ಆದುದರಿಂದಲೇ ಸತ್ಸಂಗ ಮತ್ತು ನಿರ್ಮಲ ಪರಿಸರ ನಮ್ಮೊಳಗಿನ ದೈವೀ ಪ್ರಜ್ಞೆಯನ್ನು ಚುರುಕುಗೊಳಿಸಿ ಮೈಮನಕ್ಕೆ ಮುದ ನೀಡುತ್ತದೆ. ದೇವರ ಸನಿಹಕ್ಕೆ ತಲುಪಿದ ದಿವ್ಯಾನಂದ ಅನುಭವಕ್ಕೆ ಬರುತ್ತದೆ. ಅಂತಹ ದಿವ್ಯಾನುಭವವನ್ನು ನಾವು ಉತ್ತಮ ಗುರುಗಳಿಂದ ಪಡೆಯಬಹುದು. ಉತ್ತಮ ಗುರುವನ್ನು ಪಡೆಯುವುದು ಕೂಡ ಪೂರ್ವಜನ್ಮದ ಸುಕೃತವೇ ಆಗಿರುತ್ತದೆ

   

Related Articles

error: Content is protected !!