Home » ಅಂತರದೃಷ್ಟಿ
 

ಅಂತರದೃಷ್ಟಿ

by Kundapur Xpress
Spread the love

41. ಅಂತರದೃಷ್ಟಿ
ಸೃಷ್ಟಿಶೀಲ ಹಾಗೂ ಸಂಶೋಧನಾತ್ಮಕವಾಗಿರುವ ವಿನೂತನ ವಿಚಾರಗಳನ್ನು ಮನಸ್ಸು ಅನ್ವೇಷಿಸುವುದು ಯಾವಾಗ? ಅದು ಮೌನದ ಶಿಸ್ತಿಗೆ ಒಳಪಟ್ಟು ನಿಶ್ಚಲ ಸ್ಥಿತಿಯನ್ನು ಸಾಧಿಸಿದಾಗಲೇ ಎನ್ನುವುದನ್ನು ನಾವು ಗಮನಿಸಬೇಕು. ಮನಸ್ಸಿನ ಮೂಲಭೂತ ಲಕ್ಷಣವೇ ಹೊರಗಿನ ಸಮಸ್ತ ಚಟುವಟಿಕೆಗಳ ಕುರಿತು ಯೋಚಿಸುವುದು, ಗತ ಸಂಗತಿಗಳ ಕುರಿತು ಚಿಂತಿಸುವುದು ಮತ್ತು ಪದೇ ಪದೇ ಅದನ್ನೇ ಮೆಲುಕು ಹಾಕುತ್ತಾ ಇರುವುದು! ಹಾಗಾಗಿ ಹೊಸದನ್ನು ಚಿಂತಿಸುವ, ಸೃಷ್ಟಿಶೀಲ ಸಾಧ್ಯತೆಗಳನ್ನು ಕಂಡುಕೊಳ್ಳುವ ಸಾಮಥ್ರ್ಯವನ್ನು ಪಡೆಯುವಲ್ಲಿ ನಾವು ವಿಫಲರಾಗುತ್ತೇವೆ. ಮನಸ್ಸಿನಾಳದಲ್ಲಿ ಹುದುಗಿರುವ ಸೃಷ್ಟಿಶೀಲ ಸಾಮಥ್ರ್ಯವನ್ನು ಇದು ಮುಸುಕುಗೊಳಿಸುತ್ತದೆ. ಹಾಗಾಗಿ ಅಂತಹ ಸೃಷ್ಟಿಶೀಲ ಸಾಮಥ್ರ್ಯವಾಗಲೀ ಸಾಧ್ಯತೆಯಾಗಲೀ ನಮ್ಮಲ್ಲಿ ಇದೆ ಎನ್ನುವ ಸಂದೇಹವೂ ನಮ್ಮಲ್ಲಿ ಇರುವುದಿಲ್ಲ. ಹೊರಗಿನ ಲೋಕದಲ್ಲಿ ಅಡಗಿರುವ ಗೂಢಾರ್ಥವನ್ನು ಕಂಡುಕೊಳ್ಳಲು ನಮ್ಮ ಒಳಗಿನ ಕಣ್ಣುಗಳನ್ನು ತೆರೆದು ನೋಡುವುದು ಅಗತ್ಯ. ಆದರೆ ಒಳಗಿನ ಕಣ್ಣುಗಳನ್ನು ತೆರೆಯ ಬೇಕಾದರೆ ನಮ್ಮ ಹೊರಗಿನ ಕಣ್ಣುಗಳನ್ನು ಮುಚ್ಚಿಕೊಳ್ಳುವುದು ಅಗತ್ಯ. ಹೊರಗಿನ ಕಣ್ಣು ತೆರೆದಿರುವಷ್ಟು ಹೊತ್ತೂ ಮನಸ್ಸು ಬಹಿರ್ಮುಖಿ ಚಿಂತನೆಯಲ್ಲೇ ವ್ಯಸ್ತವಾಗಿರುತ್ತದೆ. ಒಳಗಿನ ಕಣ್ಣುಗಳನ್ನು ತೆರೆಯಲು ಧ್ಯಾನದ ಶಿಸ್ತು ತುಂಬ ಅಗತ್ಯ. ಧ್ಯಾನದ ಶಿಸ್ತಿಗೆ ಮೌನದ ಸೂತ್ರವೇ ಪೂರಕ. ಧಾನ್ಯದಿಂದ ಪ್ರಾಪ್ತವಾಗುವ ಆಂತರ್ಯದ ದರ್ಶನದಲ್ಲಿ ಸೃಷ್ಟಿಶೀಲ ಸಾಧ್ಯತೆಗಳು ನಿಧಾನವಾಗಿ ತೆರೆದುಕೊಳ್ಳುತ್ತವೆ.

   

Related Articles

error: Content is protected !!