Home » ಮನಸ್ಸಿನ ಸಂತೋಷ
 

ಮನಸ್ಸಿನ ಸಂತೋಷ

by Kundapur Xpress
Spread the love

50.ಮನಸ್ಸಿನ ಸಂತೋಷ

ಪ್ರಜ್ಞಾವಸ್ಥೆಯಲ್ಲು ನಿದ್ರಾವಸ್ಥೆಯಲ್ಲು ಭಗವಂತನನ್ನು ನೆನೆಯುವಂತಹ ಮನಸ್ಸನ್ನು ನಾವು ಹೊಂದಿರಬೇಕಾದರೆ ಮನಸ್ಸನ್ನು, ಪ್ರಜ್ಞೆಯನ್ನು ಮತ್ತು ಬುದ್ಧಿಯನ್ನು ರೀತಿಯ ಸಂಸ್ಕಾರಕ್ಕೆ ಗುರಿಪಡಿಸುವುದು ಅಗತ್ಯ. ಉತ್ತಮ ಅಭ್ಯಾಸಗಳನ್ನು ಬೆಳಸಿಕೊಳ್ಳಲು ಶಿಸ್ತುಬದ್ಧ ಪ್ರಯತ್ನಬೇಕು. ನಿರಂತರವಾದ ಶಿಸ್ತಿನ ಪ್ರಯತ್ನದಲ್ಲಿ ಬೆಳೆಸಿಕೊಂಡ ಉತ್ತಮ ಅಭ್ಯಾಸಗಳು ದೇಹ, ಮನಸ್ಸು ಮತ್ತು ಬುದ್ಧಿಯನ್ನು ಸದಾ ಅತ್ಯಂತ ಪ್ರಸನ್ನವಾಗಿ ಇರಿಸುವಲ್ಲಿ ಸಹಕಾರಿಯಾಗಿರುತ್ತವೆ ಎಂಬ ಬಗ್ಗೆ ಸಂದೇಹವೇ ಬೇಡ. ನಿಜಕ್ಕಾದರೆ ಸ್ವಪ್ರಯತ್ನ ಮತ್ತು ಶಿಸ್ತಿನ ನೆರವಿಲ್ಲದೆ ನಾವು ಸದಭಿರುಚಿಯ ಹವ್ಯಾಸಗಳನ್ನು ರೂಢಿಸಿಕೊಳ್ಳಲಾರೆವು. ಪ್ರಯತ್ನ ಮತ್ತು ಶಿಸ್ತಿನ ಫಲವಾಗಿ ಎಲ್ಲ ಬಗೆಯ ಹವ್ಯಾಸಗಳನ್ನು ಹಿತಮಿತವಾಗಿ ಇರಿಸಿಕೊಳ್ಳಬಲ್ಲೆವು. ಹಾಗೆಯೇ ಅದನ್ನೊಂದು ಸಂಸ್ಕಾರವಾಗಿಯೂ ರೂಪಿಸಿಕೊಳ್ಲಬಲ್ಲೆವು. ಪಾತ್ರರ್ವಿಧಿ, ಸ್ನಾನಾದಿ ಕರ್ಮಗಳನ್ನು, ವ್ಯಾಯಾಮವನ್ನು ನಾವು ಸಂಸ್ಕಾರ ಬದುಕಿನ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿರುವುದಿಲ್ಲವೆ? ದೇವರನಾಮ ಹೇಳುವ ಅಭ್ಯಾಸ ಕೂಡ ಪ್ರಯತ್ನ ಮತ್ತು ಶಿಸ್ತಿನಿಂದಲೇ ಬರುವಂತಹದ್ದು. ಶಿಸ್ತು ಮತ್ತು ಕ್ರಮಬದ್ಧ ಪ್ರಯತ್ನದ ಫಲವಾಗಿ ನಾವು ಬೆಳೆಸಿಕೊಳ್ಳುವ ಉತ್ತಮ ಹವ್ಯಾಸಗಳು ಮತ್ತು ಸಂಸ್ಕಾರಗಳು ನಮ್ಮಲ್ಲಿ ವಿಚಾರ ಶಕ್ತಿ ಮತ್ತು ಸಹಿಷ್ಣುತೆಯನ್ನು ಬೆಳೆಸುತ್ತವೆ. ಬದುಕಿನ ಸಮಸ್ತ ಕಾರ್ಯಚಟುವಟಿಕೆಗಳನ್ನು ಕರ್ತವ್ಯದ ನೆಲೆಯಲ್ಲಿ ನಿರ್ವಹಿಸುವ ಮನೋಭಾವ ಜಾಗೃತವಾಗುತ್ತದೆ. ಸೇವೆಯೇ ಪರಮಧರ್ಮ ಎಂಬ ಸತ್ಯ ಬದುಕಿನಲ್ಲಿ ಸ್ಪಷ್ಟವಾಗತೊಡಗುತ್ತದೆ. ಆಧ್ಯಾತ್ಮಿಕ ಪರಿಕಲ್ಪನೆಯ ಸಚ್ಛಿದಾನಂದವು ಸೇವಾ ತತ್ಪರತೆಯಲ್ಲಿ ಸಾಕಾರಗೊಳ್ಳುವ ಸಾಧ್ಯತೆಯ ಅರಿವೂ ಉಂಟಾಗುತ್ತದೆ. ವಿನಾಕಾರಣ ಬದುಕನ್ನು ಬರಡಾಗಿ ಕಾಣುವ ಶುಷ್ಕ ಮನೋಭಾವವೂ ದೂರವಾಗುತ್ತದೆ.

   

Related Articles

error: Content is protected !!