Home » ಫಲಾಪೇಕ್ಷೆಯ ಸಮಸ್ಯೆ
 

ಫಲಾಪೇಕ್ಷೆಯ ಸಮಸ್ಯೆ

by Kundapur Xpress
Spread the love
  1. ಫಲಾಪೇಕ್ಷೆಯ ಸಮಸ್ಯೆ

ದೈನಂದಿನ ಬದುಕಿನ ಕಾರ್ಯಕಲಾಪಗಳನ್ನು ಲಾಭನಷ್ಟಗಳ ಲೆಕ್ಕಚಾರದಲ್ಲೆ ಕೈಗೊಳ್ಳುವ ಪ್ರವೃತ್ತಿ ನಮ್ಮದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ಮನುಷ್ಯನ ತಾಮಸಿಕ ಸ್ವಭಾವವೂ ಹೌದು. ಆದರೆ ಲಾಭನಷ್ಟಗಳ ಮೇಲೆಯೇ ದೃಷ್ಟಿನೆಟ್ಟು ಕಾರ್ಯೋನ್ಮುಖರಾದಾಗ ನಮ್ಮಲ್ಲಿನ ಆರಂಭಿಕ ಉತ್ಸಾಹ ಕ್ರಮೇಣ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಇದಕ್ಕೆ ಫಲಾಪೇಕ್ಷೆಯೇ ಮುಖ್ಯ ಕಾರಣ. ಸಾಮಾನ್ಯವಾಗಿ ಕರ್ಮಫಲಾಪೇಕ್ಷೆಯಲ್ಲಿ ಗುರಿ ಸಾಧನೆಯೇ ಮುಖ್ಯವಾದಾಗ ಅದನ್ನು ಸಾಧಿಸುವ ಮಾರ್ಗದ ಪಾವಿತ್ರ್ಯ ನಗಣ್ಯವಾಗುತ್ತದೆ. ಹಾಗಾಗಿ ಉದ್ದೇಶಿತ ಫಲವನ್ನು ಪಡೆಯಲು ಋಜತ್ವದ ಮಾರ್ಗವೆ ಬೇಕೆಂಬ ಭಾವನೆ ಮನಸ್ಸಿನಲ್ಲಿ ಮೂಡುವುದಿಲ್ಲ. ಪರಿಣಾಮವಾಗಿ ಉದ್ದೇಶಿತ ಕಾರ್ಯ ಸಾಧಿತವಾದರೂ ಅದು ಪೂರ್ಣ ಸಂತಸವನ್ನಾಗಲೀ ತೃಪ್ತಿಯನ್ನಾಗಲೀ ತರುವುದಿಲ್ಲ. ಕೆಲವೊಮ್ಮೆ ಉದ್ದೇಶಿತ ಕಾರ್ಯವನ್ನು ಸಾಧಿಸುವುದು ಲಾಭದಾಯಕವಲ್ಲವೆನಿಸಿ ಬಡಬಹುದು. ಆಗ ಅದನ್ನು ಅರ್ಧದಲ್ಲೆ ಬಿಟ್ಟು ಕೈತೊಳೆದುಕೊಳ್ಳುವರೇ ಅಧಿಕ. ಆದುದರಿಂದ ಬದುಕಿನಲ್ಲಿ ಮಾಡಬೇಕಾದ ಕರ್ಮದಿಂದ ವಿಮುಖರಾಗದೇ, ವಿಚಲಿತರಾಗದೇ, ನಿರುತ್ಸಾಹವನ್ನು ತಾಳದೆ ಇರಬೇಕಾದರೆ ಕರ್ಮಫಲದ ಮೇಲೆ ದೃಷ್ಟಿಯನ್ನು ನೆಡದಿರುವುದು ಒಳಿತು ಎಂಬ ಗೀತಾಚಾರ್ಯನ ಬೋಧನೆ ನಿತ್ಯ ಜೀವನಕ್ಕೆ ತುಂಬಾ ಪ್ರಸ್ತುತ. ಕರ್ಮಫಲದ ಮೇಲೆ ದೃಷ್ಟಿಯನ್ನು ನೆಡದಿದ್ದರೆ ಕರ್ಮದ ಮೆಲೆ ಅತ್ಯುತ್ಸಾಹವಾಗಲೀ ನಿರುತ್ಸಾಹವಾಗಲೀ ಉಂಟಾಗುವ ಪ್ರಶ್ನೆ ಇಲ್ಲ. ಲಾಭನಷ್ಟಗಳ ಲೆಕ್ಕಚಾರದ ಬಾಧೆಯೂ ಇಲ್ಲ. ಸಾಧಿತ ಕಾರ್ಯದಲ್ಲಿನ ಲೋಪದೋಷಗಳ ಲೇಪವೂ ತಟ್ಟುವುತ್ತದೆ. ಪ್ರಕ್ರಯೆಯಲ್ಲೇ ಬದುಕು ಸಾತ್ತ್ವಿಕತೆಯ ಮಟ್ಟಕ್ಕೆ ಏರಲು ಸಫಲವಾಗುತ್ತದೆ. ಶಾಂತಿ, ಸಂತೋಷ, ನೆಮ್ಮದಿಯೇ ಬಾಳಿನ ನಿಜವಾದ ಸಂಪತ್ತಾಗುತ್ತದೆ.

   

Related Articles

error: Content is protected !!