Home » ದೇವರ ಕೃಪೆ
 

ದೇವರ ಕೃಪೆ

by Kundapur Xpress
Spread the love
  1. ದೇವರ ಕೃಪೆ

ಮೋಹರೂಪಿ ಕೊಚ್ಚೆ ಎಂಬ ಸಾಗರಕ್ಕೆ ನಮ್ಮನ್ನು ಕೆಡಹುವ ದುಷ್ಟ ಶಕ್ತಿಯನ್ನು ನಾವು ಸೋಲಿಸುವುದಾದರೂ ಹೇಗೆ? ಲೋಭ – ಮೋಹವನ್ನು ಗೆಲ್ಲಬೇಕೆಂದರೆ ಅದು ಬಹಳ ಕಷ್ಟದ ಮಾತು. ಸಂಪತ್ತಿನ ಮೇಲಿನ ಮೋಹ, ರಕ್ತಸಂಬಂಧಿಗಳು, ಬಂಧು – ಮಿತ್ರರ ಮೇಲಿನ ಮೋಹವನ್ನು ಗೆಲ್ಲುವುದು ಅಷ್ಟು ಸುಲಭವೇ? ಪ್ರಪಂಚದ ಯಾವುದೇ ಮಹಾಕಾವ್ಯವನ್ನು ತೆಗೆದು ನೋಡಿದರೂ ಹೆಣ್ಣು, ಹೊನ್ನು, ಮಣ್ಣಿಗಾಗಿಯೇ ಮಹಾ ಯುದ್ಧಗಳು ನಡೆದಿರುವುದನ್ನು ನಾವು ಕಾಣಬಹುದು. ಧನ – ಕನಕದ ಮೇಲಿನ ಮೋಹವೂ ಅಷ್ಟೇ ಅನಾಹುತಗಳಿಗೆ ಕಾರಣವಾಗಿದೆ. ಸಾವಿನ ರಹಸ್ಯವನ್ನು ತನಗೆ ತಿಳಿಸಬೇಕೆಂದು ಯಮಧರ್ಮರಾಯನನ್ನು ಒತ್ತಾಯಿಸಿದ ನಚಿಕೇತನಿಗೆ ಯಮ ಹೇಳುತ್ತಾನೆ. ಸಾವಿನ ರಹಸ್ಯವೊಂದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು? ನಿನಗೆಷ್ಟು ಧನ – ಕನಕ ಬೇಕೋ ಅಷ್ಟನ್ನು ಕೇಳು. ಇದಕ್ಕೆ ನಚಿಕೇತನು ಯಮನಿಗೆ ಕೊಟ್ಟ ಉತ್ತರ ತುಂಬ ಮಾರ್ಮಿಕ. ‘ನ ವಿತ್ತೇನ ತರ್ಪಣೀಯ ಮನುಷ್ಯಃ’! ;ಎಷ್ಟೇ ಧನ – ಕನಕ ಕೊಟ್ಟರೂ ನೀನು ಮನುಷ್ಯನನ್ನು ತೃಪ್ತಿಪಡಿಸಲಾರೆ’ ಎನ್ನುವುದು ಇದರ ತಾತ್ಪರ್ಯ. ಆದುದರಿಂದ ಹೆಣ್ಣು, ಹೊನ್ನು, ಮಣ್ಣಿನ ಮೇಲೆ ವ್ಯಾಮೋಹ ಮನುಷ್ಯನನ್ನು ಅನಾದಿ ಕಾಲದಿಂದಲೂ ಬಿಟ್ಟದ್ದಿಲ್ಲ. ಹಾಗೆಂದು ಆ ವ್ಯಾಮೋಹದಿಂದ ಉಂಟಾದ ಅನರ್ಥಗಳು ಅವನ ಬೆನ್ನು ಬಿಟ್ಟಿಲ್ಲ! ಆದುದರಿಂದಲೇ ವ್ಯಾಮೋಹವನ್ನು ಹತ್ತಿಕ್ಕದೆ ಮನುಷ್ಯನಿಗೆ ಏಳಿಗೆ ಇಲ್ಲ ಎಂಬ ಮಾತು ಸತ್ಯ. ಕೃಷ್ಣ ಇದನ್ನು ಮತ್ತಷ್ಟು ಒತ್ತಿ ಹೇಳುತ್ತಾನೆ. ಆಸೆಯಿಂದ ದುಃಖ, ದುಃಖದಿಂದ ಉದ್ವೇಗ, ಉದ್ವೇಗದಿಂದ ಕೋಪ, ಕೋಪದಿಂದ ತಾಪ ಸಹಜ. ಪರಿಣಾಮದಲ್ಲಿ ವಿವೇಚನೆ ನಷ್ಟ. ಆಸೆ ಎಂಬ ಕಡಲಿನಲ್ಲಿ ಜೀವನ ನೌಕೆಯನ್ನು ನಿರ್ವಿಘ್ನವಾಗಿ ನಡೆಸಿ ದಡ ಸೇರಬೇಕೆಂದರೆ ದೇವರ ಕೃಪೆಯೊಂದೇ ಮುಖ್ಯ.

 

   

Related Articles

error: Content is protected !!