Home » 8. ಹುಟ್ಟು-ಸಾವಿನ ಬಂಧನ
 

8. ಹುಟ್ಟು-ಸಾವಿನ ಬಂಧನ

by Kundapur Xpress
Spread the love

ಹುಟ್ಟು-ಸಾವಿನ ಬಂಧನ

ಸಾಮಾನ್ಯವಾಗಿ ನಮಗೆ ದೇವರ ಮೇಲೆ ಭಕ್ತಿ, ಪ್ರೀತಿ ಹುಟ್ಟುವುದು ಎಷ್ಟು ಬೇಗವೋ ಅದು ಮಾಯವಾಗುವುದು ಕೂಡ ಅದು ಮಾಯವಾಗುವುದು ಕೂಡ ಅಷ್ಟೇ ಬೇಗ. ಸುಖ-ಸಂತೋಷದಲ್ಲಿದ್ದಾಗ ನೆಂಟರು, ಸಂಬಂಧಿಕರು, ಮಿತ್ರರು ಹತ್ತಿರವಾಗುವುದು ಎಷ್ಟು ಸಹಜವೋ ಕಷ್ಟಕಾರ್ಪಣ್ಯಗಳು ಒದಗಿದಾಗ ಅವರೆಲ್ಲರೂ ದೂರವಾಗಿ ದೇವರು ಮಾತ್ರವೇ ಹತ್ತಿರವಾಗುವುದನ್ನು ನಾವು ಅನುಭವದಿಂದ ಕಂಡಿಲ್ಲವೇ? ಆದರೆ ಅದಕ್ಕೆ ಕಾರಣ ದೇವರಲ್ಲ ನಾವೇ ಆಗಿದ್ದೇವೆ. ಏಕೆಂದರೆ ಐಶ್ವರ್ಯ-ಸುಖ-ಸಂತೋಷ ಪ್ರಾಪ್ತವಾಗಬೇಕೆಂದು ದೇವರಿಗೆ ನಾವು ಸದಾ ಮೊರೆಯನ್ನಿಡುತ್ತೇವೆ. ಆದರೆ ಅದು ಪ್ರಾಪ್ತವಾದ ಕೂಡಲೇ ದೇವರನ್ನು ಮರೆಯಲು ತೊಡಗುತ್ತೇವೆ. ಆಗ ನಮ್ಮ ಮನಸ್ಸನ್ನು ತುಂಬಿಕೊಳ್ಳುವವರು ನೆಂಟರು, ಬಂಧುಗಳು, ಮಿತ್ರರು! ಹಾಗಯೇ ಮತ್ತೆ ಸಂಕಷ್ಟಗಳು ಬರತೊಡಗಿದರೆ ಬಂಧು-ಮಿತ್ರರು ದೂರವಾಗತೊಡಗಿ ದೇವರು ಹತ್ತಿರವಾಗುತ್ತಾನೆ! ಹೀಗೆ ಕರ್ಮಫಲದಲ್ಲಿ ದೃಷ್ಟಿಯನ್ನು ನೆಟ್ಟವರಿಗೆ ಸಮತ್ವದ ಯೋಗ ಒಲಿಯುವುದಾದರು ಹೇಗೆ? ಏಕೆಂದರೆ ತಾವು ಬಯಸಿದ್ದು ತಮಗೆ ಸಿಗದೇ ಹೋದಾಗ ಅವರಲ್ಲಿ ಕೋಪ-ತಾಪ, ಉದ್ವೇಗ, ಹತಾಶೆಯೇ ಮೊದಲಾದ ಭಾವಿಕಾರಗಳು ಉಂಟಾಗುತ್ತವೆ. ಪರಿಣಾಮವಾಗಿ ಅವರು ದೇವರನ್ನೇ ಶಪಿಸತೊಡಗುತ್ತಾರೆ! ಅದಕ್ಕೆಂದೇ ಕೃಷ್ಣ ಹೇಳುತ್ತಾನೆ. ಫಲಾಪೇಕ್ಷೆಯುಳ್ಳ ಜನರು ಅತ್ಯಂತ ದೀನರು. ಇದರ ದೆಸೆಯಿಂದಲೇ ಅವರು ಮತ್ತೆ ಮತ್ತೆ ಜನನ-ಮರಣಗಳ ಬಂಧನಕ್ಕೆ ಗುರಿಯಾಗುತ್ತಾರೆ. ಮೋಕ್ಷ ಅವರ ಪಾಲಿಗೆ ಮರೀಚಿಕೆಯಾಗುತ್ತದೆ.

   

Related Articles

error: Content is protected !!