Home » ದುಃಖಕ್ಕೆ ಹೇತು
 

ದುಃಖಕ್ಕೆ ಹೇತು

by Kundapur Xpress
Spread the love
  1. ದುಃಖಕ್ಕೆ ಹೇತು

ಬದುಕಿನಲ್ಲಿ ನಾವು ಎಷ್ಟೋ ಕೆಲಸಗಳನ್ನು ಕೈಗೊಳ್ಳುತ್ತೇವೆ. ಸ್ವಹಿತ, ಜನಹಿತ ಸಾಧನೆಯ ಕಾರ್ಯಕಲಾಪಗಳನ್ನೂ ನಿರ್ವಹಿಸುತ್ತೇವೆ. ಕೆಲಸಕಾರ್ಯಗಳೆಲ್ಲವೂನನ್ನಿಂದಲೇಸಾಧ್ಯವಾಗುತ್ತಿದೆ ಎಂಬ ಭಾವನೆಯನ್ನು ಬೆಳೆಸಿಕೊಳ್ಳುತ್ತೇವೆ. ಹಾಗೆಯೇ ಕಾರ್ಯಗಳ ಫಲಿತಾಂಶವನ್ನು ತದೇಕಚಿತ್ತದಿಂದ, ಆಸೆಬುರುಕತನದಿಂದ ಎದುರು ನೋಡುತ್ತೇವೆ. ನಮ್ಮ ನಿರೀಕ್ಷೆಯ ಫಲಿತಾಂಶಕ್ಕಾಗಿಯೇ ತುದಿಗಾಲಲ್ಲಿ ನಿಂತಿರುತ್ತೇವೆ. ಆದರೆ ಫಲಿತಾಂಶ ಮಾತ್ರ ಇನ್ನೇನೋ ಆಗಿರುತ್ತದೆ. ಅಥವಾ ನಮ್ಮ ನಿರೀಕ್ಷೆಯ ಮಟ್ಟಕ್ಕೆ ಫಲಿತಾಂಶ ಬಂದಿರುವುದಿಲ್ಲ. ಒಡನೆಯೇ ಮನಸ್ಸಿನ ದುಃಖ, ಹತಾಶೆ, ಜುಗುಪ್ಸೆ, ಕೋಪ ಉಕ್ಕೇರಿ ಬರುತ್ತದೆ. ಮನಸ್ಸಿನ ಸ್ತಿಮಿತ ಕುಂದತೊಡಗುತ್ತದೆ. ಮನಸ್ಸಿನ ಉಲ್ಲಾಸ, ಪ್ರಫುಲ್ಲತೆ ಕಮರಿ ಹೋಗ ತೊಡಗುತ್ತದೆ. ದೇಹದ ಆರೋಗ್ಯದ ಮೇಲೂ ಅದರ ದುಷ್ಪರಿಣಾಮ ಕಂಡು ಬರಲಾರಂಭಿಸುತ್ತದೆ. ‘ನಾನು ಎಣಿಸಿದ್ದೇ ಒಂದು, ಆದದ್ದೇ ಇನ್ನೊಂದುಎಂಬ ಹತಾಶೆಯಲ್ಲಿ ಮುಂದಿನ ಕಾರ್ಯಚಟುವಟಿಕೆಗಳಲ್ಲಿ ನಿರಾಸಕ್ತಿ ಮೂಡುತ್ತದೆ. ಇನ್ನು ಯಾವ ಕೆಲಸವನ್ನೂ ಮಾಡದಿರುವುದೇ ಲೇಸು ಎಂಬ ನಿಷ್ಕ್ರಿಯ ಭಾವವನ್ನು ಬೆಳೆಸಿಕೊಳ್ಳುತ್ತೇವೆ. ಇಂತಹ ಹತಾಶೆಯ ಮನೋಭಾವ ನಮ್ಮಲ್ಲಿ ಬರಲು ಯಾರು ಕಾರಣರು? ನಾವೇ? ವಿಧಿಯೇ? ವಿಧಿಯಂತೂ ಅಲ್ಲವೇ ಅಲ್ಲ; ಇದಕ್ಕೆ ನಾವೇ ಕಾರಣರು. ಕರ್ಮದಲ್ಲಿ ತೊಡಗಿಕೊಂಡಿದ್ದಾಗ ನಾವು ನಿರ್ದಿಷ್ಟ ಫಲಾಪೇಕ್ಷೆಯಲ್ಲಿ ಅತ್ಯಾಸಕ್ತಿಯನ್ನು ತಳೆದದ್ದೇ ತತ್ಫಲವಾದ ದುಃಖಕ್ಕೆ ಕಾರಣ. ಪರೀಕ್ಷೆಯಲ್ಲಿ ಉತ್ತರ ಬರೆದ ಬಳಿಕ ನನಗೆ ಇಂತಿಷ್ಟೇ ಮಾರ್ಕುಗಳು ಬರುವುದು ನಿಶ್ಚಿತ ಎಂಬ ಅಭಿಪ್ರಾಯಕ್ಕೆ ಬರುವ ವಿದ್ಯಾರ್ಥಿಗೂ ಜೀವನವೆಂಬ ಪರೀಕ್ಷೆಯನ್ನು ದಿನನಿತ್ಯ ಎದರಿಸುತ್ತಾ ನಿರ್ದಿಷ್ಟ ಫಲಿತಾಂಶವನ್ನು ಅಪೇಕ್ಷಿಸುವ ನಮಗೂ ನಿಜವಾದ ಅರ್ಥದಲ್ಲಿ ಯಾವ ಅಂತರವೂ ಇಲ್ಲ. ಇಬ್ಬರಿಗೂ ದುಃಖಕ್ಕೆ ನಿಶ್ಚಿತ. ನಮ್ಮ ನಮ್ಮ ಪಾಲಿನ ಕರ್ಮವನ್ನು ನಾವು ಮಾಡುವವರೇ ವಿನಾ ಅದರ ಫಲವನ್ನು ನಿರ್ಧರಿಸುವವರಲ್ಲ ಎಂಬ ಸತ್ಯವನ್ನು ಅರಿಯುವವರೆಗೂ ಬದುಕಿನಲ್ಲಿ ದುಃಖ, ಹತಾಶೆ ತಪ್ಪಿದ್ದಲ್ಲ.

   

Related Articles

error: Content is protected !!