Home » ಅಜ್ಞಾನದ ಫಲ
 

ಅಜ್ಞಾನದ ಫಲ

by Kundapur Xpress
Spread the love
  1. ಅಜ್ಞಾನದ ಫಲ

ಕರ್ಮಸಂಬಂಧೀ ದುಃಖದಿಂದ ಪಾರಾಗಲು ನಾವು ಏನು ಮಾಡಬೇಕು? ಆನಂದಮಯ ಬದುಕನ್ನು ನಡೆಸ ಬಯಸುವ ಎಲ್ಲರಲ್ಲೂ ಉದ್ಭವವಾಗುವ ಪ್ರಶ್ನೆ ಇದು. ಕರ್ಮಗಳ ಕರ್ತೃವೇ ಕರ್ಮಫಲ ನಿರ್ಧಾರಕ ತಾನೆಂದು ಭಾವಿಸಿದೊಡನೆಯೇ ತನ್ನ ಬದುಕಿನ ಸಮಸ್ತ ದುಃಖಗಳಿಗೂ ತಾನೇ ಕಾರಣವಾಗುತ್ತಾನೆ ಎಂಬ ಮಾತಿನಲ್ಲಿ ಸಂದೇಹವೇ ಇಲ್ಲ. ನ್ಯಾಯದಾನದಲ್ಲಿ ಯಾರೊಬ್ಬರೂ ತಮ್ಮ ಹಿತಾಸಕ್ತಿಯ ವ್ಯಾಜ್ಯದಲ್ಲಿ ತಾವೇ ನ್ಯಾಯಾಧೀಶರಾಗಲಾರರು. ಸ್ವತಃ ಓರ್ವ ನ್ಯಾಯಾಧೀಶ ಕೂಡ ಪರೋಕ್ಷವಾಗಿ ಇಲ್ಲವೇ ಪ್ರತ್ಯಕ್ಷವಾಗಿ ತನ್ನ ಹಿತಾಸಕ್ತಿ ಇರುವ ವ್ಯಾಜ್ಯವೊಂದರಲ್ಲಿ ತೀರ್ಪು ಕೊಡುವಂತಿಲ್ಲ, ಮಾತ್ರವಲ್ಲ ವಿಚಾರಣೆಯನ್ನೇ ನಡೆಸುವಂತಿಲ್ಲ. ಹಾಗಿರುವಾಗ ನಾವು ನಿಯಮಕ್ಕೆ ಹೊರತಾಗಿರಲು ಸಾಧ್ಯವೇ? ನಮ್ಮ ಕರ್ಮಗಳ ಫಲಗಳನ್ನು ನಿರ್ಣಯಿಸ್ಸುವ ಅಧಿಕಾರ ನಮಗೆ ಇರಲು ಸಾಧ್ಯವೇ? ಹಾಗೆಂದು ಕರ್ಮತ್ಯಾಗ ಮಾಡುವ ಅಧಿಕಾರವೂ ನಮಗಿಲ್ಲ ಎನ್ನುವುದು ನಮಗೆ ಇರಲು ಸಾಧ್ಯವೇ? ಹಾಗೆಂದು ಕರ್ಮತ್ಯಾಗ ಮಾಡುವ ಅಧಿಕಾರವೂ ನಮಗಿಲ್ಲ. ಎನ್ನುವುದು ನಮಗೆ ತಿಳಿದಿರಬೇಕು. ಕರ್ಮೇಂದ್ರಿಯಗಳಲ್ಲಿ ಅಡಕವಾಗಿರುವ ಶಕ್ತಿಯ ಸದ್ಬಳಕೆಗೆ ನಾವು ಕರ್ತವ್ಯ ಬದ್ಧರಾಗಿದ್ದೇವೆ. ಹಾಗಾಗಿ ನಿಷ್ಕ್ರಿಯರಾಗಿರಲು ನಮಗೆ ಸಾಧ್ಯವೇ ಇಲ್ಲ. ನಿರಂತರವಾಗಿ ಕರ್ಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕೆಂಬುದೇ ದೇವರ ಇಚ್ಛೆಯಾಗಿದೆ. ಇದಕ್ಕೆ ಅನುಗುಣವಾಗಿಯೇ ನಮ್ಮ ದೇಹ ರಚನೆ ಇದೆ. ಅದು ನಮ್ಮ ಮನಸ್ಸು ಮತ್ತು ಬುದ್ಧಿಯ ಆಜ್ಞಾನುವರ್ತಿಯಾಗಿ ಕೆಲಸ ಮಾಡುತ್ತದೆ. ನಿಜವಾದ ಅರ್ಥದಲ್ಲಿ ನಮ್ಮ ದೇಹ ಅತ್ಯಂತ ವಿನಯದ, ಸೌಜನ್ಯದ ಸೇವಕ. ನಾವು ಹೇಳಿದಂತೆ ನಮ್ಮ ದೇಹ ಕೆಲಸಮಾಡುತ್ತದೆ. ಸೋಮಾರಿಯಾಗಿ ಕಾಲಹರಣ ಮಾಡುವ ಸ್ವಭಾವ ಅದರದ್ದಲ್ಲ. ಆದರೆ ಅಂತಹ ಆಜ್ಞೆ ನಮ್ಮ ಮನಸ್ಸಿನಿಂದ ಹೊರಟು ಬಂದರೆ ಅದನ್ನು ಶಿರಸಾವಹಿಸಿ ತಾನು ಸೋಮಾರಿ ಎಂಬಂತೆ ಅದು ವರ್ತಿಸುತ್ತದೆ. ಸತ್ಯವನ್ನು ತಿಳಿಯದ ಕಾರಣಕ್ಕೆ ನಮ್ಮ ದೇಹವೇ ನಮ್ಮ ಒಡೆಯನೆಂಬ ಅಜ್ಞಾನದಿಂದ ನಾವು ವರ್ತಿಸುತ್ತೇವೆ!

   

Related Articles

error: Content is protected !!