Home » ನಿತ್ಯ ಸಂಗ್ರಾಮ
 

ನಿತ್ಯ ಸಂಗ್ರಾಮ

by Kundapur Xpress
Spread the love
  1. ನಿತ್ಯ ಸಂಗ್ರಾಮ

ನಮ್ಮೊಳಗೆ ಅಡಗಿರುವ ಒಳ್ಳೆಯ – ಕೆಟ್ಟ ಮನುಷ್ಯನನ್ನು ನಾವು ಚೆನ್ನಾಗಿ ತಿಳಿಯದೆ ಅನ್ಯರನ್ನು ತಿಳಿಯುವುದು ನಮಗೆ ಸಾಧ್ಯವೇ? ನಾವು ಯಾವತ್ತೂ ಪೂರ್ತಿಯಾಗಿ ಒಳ್ಳೆಯ ಮನುಷ್ಯರಾಗಿಯೇ ಇತರರೊಡನೆ ವ್ಯವಹರಿಸುತ್ತಿರುತ್ತೇವೆ ಎಂಬ ಭ್ರಮೆ ನಮ್ಮದಾಗಿರುತ್ತದೆ. ಹಳೆಯ ಸಿನಿಮಾಗಳನ್ನು ನಾವಿಲ್ಲಿ ಸ್ವಲ್ಪ ನೆನಪಿಸಿಕೊಳ್ಳೋಣ. ಹಳೆಯ ಸಿನಿಮಾಗಳಲ್ಲಿ ನಾಯಕ ಪೂರ್ತಿಯಾಗಿ ಸದ್ಗುಣಿ ಮತ್ತು ಖಳನಾಯಕ ಪೂರ್ತಿಯಾಗಿ ದುರ್ಗಣಿ! ಆದರೆ ಇಂದಿನ ಸಿನಿಮಾಗಳಲ್ಲಿ ನಾಯಕನ ಪಾತ್ರಧಾರಿ ಸದ್ಗುಣಿಯೂ ಹೌದು, ದುರ್ಗುಣಿಯೂ ಹೌದು! ಅವನಲ್ಲಿ ನಾಯಕ, ಖಳನಾಯಕ ಎರಡೂ ಗುಣಗಳು ಮಿಳಿತವಾಗಿವೆ. ವಸ್ತುನಿಷ್ಠವಾಗಿ ಮತ್ತು ಸಂದರ್ಭಾನುಸಾರವಾಗಿ ನೋಡಿದರೆ ನಾವೂ ಹಾಗೆಯೇ ಇದ್ದೇವೆ. ಆದುದರಿಂದ ಮೂಲಭೂತವಾಗಿ ನಾವು ಒಪ್ಪಿಕೊಳ್ಳಲೇ ಬೇಕಾದ ಸತ್ಯ ಇಷ್ಟು: ಯಾರೂ ಪೂರ್ತಿಯಾಗಿ ಶ್ರೀ ರಾಮನೂ ಅಲ್ಲ ರಾವಣನೂ ಅಲ್ಲ. ಆದರೆ ಅವೆರಡೂ ಆಗಿರುತ್ತಾರೆ – ಸಂದರ್ಭಾನುಸಾರ! ನಮ್ಮೊಳಗಿನ ರಾಮ – ರಾವಣರನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸಬೇಕು. ರಾವಣತ್ವವನ್ನು ತೊರೆದು  ರಾಮತ್ವವನ್ನು ಮೆರೆಯುತ್ತ ನಾವು ಸಾಗಬೇಕು. ನಮ್ಮ ಬದುಕು, ಜೀವನ, ಸಮಾಜ ಎಲ್ಲವೂ ವಿರೋಧಾಭಾಸಗಳಿಂದ ಕೂಡಿದ ಒಂದು ಮಿಶ್ರಣವೇ ಆಗಿದೆ. ಸ್ವಾಮೀ ವಿವೇಕಾನಂದರು ಹೇಳುತ್ತಾರೆ: ಪರಿಪೂರ್ಣವಾದ ಜೀವನ ಎಂಬುದು ಪರಸ್ಪರ ವಿರೋಧವಾದ ಅರ್ಥಗಳುಳ್ಳ ಶಬ್ದ. ನಮಗೂ ನಮ್ಮ ಹೊರಗಿನ ಪ್ರತಿಯೊಂದಕ್ಕೂ ನಿತ್ಯ ಸಂಗ್ರಾಮದ ಸ್ಥಿತಿ ಇರುವುದೇ ಜೀವನ. ಈ ಹೋರಾಟ ನಿಂತಾಗಲೇ ಜೀವನವೂ ಅಲ್ಲಿಗೆ ಅಂತ್ಯಗೊಳ್ಳುವುದು! ಅಂತರಂಗದ ಮತ್ತು ಬಹಿರಂಗದ ಒಳಿತು – ಕೆಡುಕುಗಳ ನಡುವಿನ ನಿರಂತರ ಹೋರಾಟವೇ ಈ ಜೀವನ. ಪರಿಪೂರ್ಣತೆಯನ್ನು ಸಾಧಿಸುವುದು ನಮ್ಮ ಜೀವನದ ಗುರಿಯಾಗಬಹುದೇ ವಿನಾ ನಾವು ಪರಿಪೂರ್ಣರಾಗಿರಲು ಸಾಧ್ಯವಿಲ್ಲ!

   

Related Articles

error: Content is protected !!