51
ಶ್ರೀನಗರ : ಕಾಶ್ಮೀರದ ಹಲವು ಪ್ರದೇಶಕ್ಕೆ ಆಗಮಿಸಿದ ಅಮರಾಥ ಯತ್ರೆಯ ಮೊದಲ ಬ್ಯಾಚ್‌ನ ಯಾತ್ರಾರ್ಥಿಗಳನ್ನು ಸ್ಥಳೀಯ ಅಧಿಕಾರಿಗಳು ಸ್ವಾಗತಿಸಿದ್ದಾರೆ.
ಜಮ್ಮುವಿನ ಭಗವತಿ ನಗರದ ಯಾತ್ರೆಯ ಬೇಸ್ ಕ್ಯಾಂಪ್‌ನಿಂದ 5,892 ಯಾತ್ರಿಕರ ಮೊದಲ ತಂಡಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಸಿರು ನಿಶಾನೆ ತೋರಿದ್ದಾರೆ.
ಯಾತ್ರಿಕರು ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಖಾಜಿ ಗುಂಡ್ ಪ್ರದೇಶದ ನುಗ್ ಸುರಂಗದ ಮೂಲಕ ಕಣಿವೆ ತಲುಪಿದ್ದಾರೆ. ಅಲ್ಲಿ ಅವರನ್ನು ದಕ್ಷಿಣ ಕಾಶ್ಮೀರ ಶ್ರೇಣಿಯ ಉಪ ಪೊಲೀಸ್ ಮಹಾ ನಿರೀಕ್ಷಕರು ಮತ್ತು ಕುಲ್ಗಾಂ ಉಪ ಆಯುಕ್ತರು ಸ್ವಾಗತಿಸಿದ್ದಾರೆ

