Home » ಅಲ್‌ಖೈದಾ ಜತೆಗೆ ನಂಟು : ನಾಲ್ವರು ಶಂಕಿತರ ಬಂಧನ
 

ಅಲ್‌ಖೈದಾ ಜತೆಗೆ ನಂಟು : ನಾಲ್ವರು ಶಂಕಿತರ ಬಂಧನ

by Kundapur Xpress
Spread the love

ಹೊಸದಿಲ್ಲಿ: ಅಲ್‌ಖೈದಾ ಜತೆಗೆ ನಂಟು ಹೊಂದಿದ್ದ ಆರೋಪದ ಮೇಲೆ ಗುಜರಾತ್‌ನ ಎಟಿಎಸ್ ನಾಲ್ವರು ಶಂಕಿತರನ್ನು ಬಂಧಿಸಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಭಾರತೀಯ ಉಪಖಂಡದಲ್ಲಿ ಅಲ್‌-ಖೈದಾದೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ನಾಲ್ವರನ್ನು ಬಂಧಿಸುವ ಮೂಲಕ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿದೆ.

ಅಧಿಕಾರಿಗಳ ಪ್ರಕಾರ, ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ (ಎಕ್ಯೂಐಎಸ್) ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ಆರೋಪಿಗಳನ್ನು ದಿಲ್ಲಿಯ ಮೊಹಮ್ಮದ್ ಪೈಕ್, ಅಹಮದಾಬಾದ್‌ನ ಮೊಹಮ್ಮದ್ ಫರ್ದೀನ್, ಅರಾವಳಿಯ ಮೊದಸಾದ ಸೆಫುಲ್ಲಾ ಖುರೇಶಿ ಮತ್ತು ಉತ್ತರ ಪ್ರದೇಶದ ನೋಯ್ಡಾದ ಜೀಶಾನ್ ಅಲಿ ಎಂದು ಗುರುತಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದ ನಾಲ್ವರು ಬಂಧಿತರು, ನಕಲಿ ಕರೆನ್ಸಿ ದಂಧೆಯಲ್ಲಿ ಭಾಗಿಯಾಗಿದ್ದರು. ಭಯೋತ್ಪಾದಕ ಸಂಘಟನೆಯಾದ ಅಲ್-ಖೈದಾದ ಸಿದ್ಧಾಂತವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿದ್ದರು. ಭಯೋತ್ಪಾದಕ ಸಂಘಟನೆಯ ಸಿದ್ಧಾಂತವನ್ನು ಹರಡಲು ಆರೋಪಿಗಳು ಇತರ ಅಪ್ಲಿಕೇಶನ್‌ಗಳೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Related Articles

error: Content is protected !!