Home » ಜಾರ್ಖಂಡ್‌ನಲ್ಲಿ ಎಂಟು ನಕ್ಸಲರ ಎನ್‌ಕೌಂಟರ್
 

ಜಾರ್ಖಂಡ್‌ನಲ್ಲಿ ಎಂಟು ನಕ್ಸಲರ ಎನ್‌ಕೌಂಟರ್

by Kundapur Xpress
Spread the love

ರಾಂಚಿ : ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಸೋಮವಾರ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋಗಳು ಮತ್ತು ಪೊಲೀಸರೊಂದಿಗೆ ನಡೆದ ಎನ್ ಕೌಂಟರ್‌ನಲ್ಲಿ ಕೇಂದ್ರ ಸಮಿತಿಯ ಉನ್ನತ ಸದಸ್ಯ ಸೇರಿ ಎಂಟು ನಕ್ಸಲರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಲಾಲ್ವಾನಿಯಾ ಪ್ರದೇಶದ ಲುಗು ಹಿಲ್ಸ್‌ನಲ್ಲಿ ಬೆಳಿಗ್ಗೆ 5.30ರ ಸುಮಾರಿಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಜ್ಯ ಪೊಲೀಸರೊಂದಿಗೆ 209 ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಂಟು ನಕ್ಸಲರು ಹತರಾದರು. ಈ ವೇಳೆ ಅವರಿಂದ ಒಂದು ಎಕೆ ಸರಣಿ ರೈಫಲ್, ಮೂರು ಐಎನ್ ಎಸ್ ಎಎಸ್ ರೈಫಲ್‌ಗಳು, ಒಂದು ಸ್ವಯಂ ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಎಂಟು ದೇಶೀಯ ನಿರ್ಮಿತ ಬಂದೂಕುಗಳು ಮತ್ತು ಒಂದು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Related Articles

error: Content is protected !!