ಕರಾಚಿ : 2019ರ ಫೆ.14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆ ವಾಹನ ಗುರಿಯಾಗಿಸಿ ಪಾಕಿಸ್ತಾನಿ ಉಗ್ರರು 40 ಯೋಧರನ್ನು ಕೊಂದು ಹಾಕಿದ್ದರು. ಈಗ ತನ್ನದೇ ಕೃತ್ಯದ ರೀತಿಯ ರುಚಿಯನ್ನು ಪಾಕ್ ಉಂಡಿದೆ. ಪುಲ್ವಾಮಾ ದಾಳಿ ಮಾದರಿಯಲ್ಲೇ ಬಲೂಚಿಸ್ತಾನ ಬಂಡುಕೋರರು, ಪಾಕ್ ಸೇನಾ ವಾಹನ ಗುರಿಯಾಗಿಸಿ ಆತ್ಮಾಹುತಿ ದಾಳಿ ನಡೆಸಿದ್ದು, 90 ಪಾಕ್ ಯೋಧರು ಸಾವನ್ನಪ್ಪಿದ್ದಾರೆ.
ಆದರೆ ಪಾಕ್ ಸರ್ಕಾರ ಮಾತ್ರ ಸಾವಿನ ಸಂಖ್ಯೆ ಮುಚ್ಚಿಡಲು ಯತ್ನಿಸಿದ್ದು, ಈ ದಾಳಿ ಯಲ್ಲಿ 5 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.
500ಕ್ಕೂ ಹೆಚ್ಚು ಜನರಿದ್ದ ರೈಲನ್ನು ಬಲೂಚಿ ಬಂಡುಕೋರರು ಅಪಹರಣದ ಭೀಕರ ಘಟನೆ ಬೆನ್ನಲ್ಲೇ, ಈ ಘಟನೆ ನಡೆದಿದೆ. ಜೊತೆಗೆ ಶನಿವಾರ ರಾತ್ರಿಯಿಂದೀಚೆಗೆ ಬಲೂಚ್ ಪ್ರಾಂತ್ಯದಲ್ಲಿ ಸೇನೆಯನ್ನು ಗುರಿಯಾಗಿಸಿ ಕೇವಲ 12 ಗಂಟೆಗಳ ಅವಧಿಯಲ್ಲಿ 19 ದಾಳಿ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ.
ಏನಾಯ್ತು ?
ಬಲೂಚಿಸ್ತಾನದ ನೋಲ್ಕಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಪ್ಯಾರಾ ಮಿಲಿಟರಿ ಫ್ರೆಂಟಿಯರ್ ಕಾರ್ಪ್’ ಗುರಿಯಾಗಿಸಿ ಬಲೂಚ್ ಲಿಬರೇಷನ್ ಆರ್ಮಿಯ (ಬಿಎಲ್‌ಎ) ಬಂಡುಕೋರರು, ಸ್ಫೋಟಕ ತುಂಬಿದ ವಾಹನವನ್ನು ಸೇನಾ ಬಸ್‌ಗೆ ಅಪಳಿಸಿ ಆತ್ಮಾಹುತಿ ದಾಳಿ ನಡೆಸಿದ್ದಾರೆ

