121
ನವದೆಹಲಿ : ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 8 ವರ್ಷದ ಬಾಲಕಿ ಸೇರಿ ಐವರ ಮೇಲೆ ಕಾರು ಚಲಾಯಿಸಿದ ಆಘಾತಕಾರಿ ಘಟನೆ ದೆಹಲಿಯ ವಸಂತ ವಿಹಾರ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ. ಐವರೂ ಗಾಯಗೊಂಡಿದ್ದು, ಕಾರು ಚಾಲಕ ಉತ್ಸವ್ ಶೇಖರ್ (40) ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಘಟನೆ ಕನ್ನಡದ ‘ಆ್ಯಕ್ಸಿಡೆಂಟ್’ ಸಿನಿಮಾ ದೃಶ್ಯವನ್ನೇ ನೆನಪಿಸಿದೆ. ಶನಿವಾರ ರಾತ್ರಿ 2 ದಂಪತಿ ಹಾಗೂ ಒಂದು ಹೆಣ್ಣುಮಗು ವಸಂತ ವಿಹಾರ ಪ್ರದೇಶದ ಫುಟ್‌ಪಾತ್ ಮೇಲೆ ಮಲಗಿದ್ದರು. ಆಗ ಕುಡಿದ ಮತ್ತಿನಲ್ಲಿದ್ದ ಉತ್ಸವ್ ಶೇಖರ್ ಐವರ ಮೇಲೂ ತನ್ನ ಆಡಿ ಕಾರು ಚಲಾಯಿಸಿದ್ದಾನೆ

