93
ಚೆನ್ನೈ : ತಮಿಳುನಾಡಿನ ಚೆನ್ನೈ ಸಮೀಪ ತಿರುವಳ್ಳೂರು ರೈಲು ನಿಲ್ದಾಣದ ಬಳಿ ಡೀಸೆಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಗೂಡ್ಸ್ ರೈಲಿಗೆ ಬೆಂಕಿ ತಗುಲಿದ್ದು, 18 ಟ್ಯಾಂಕರ್ ಗಳು ಆಹುತಿಯಾಗಿವೆ. ಈ ರೈಲು 18 ಟ್ಯಾಂಕರ್ ವ್ಯಾಗನ್‌ಗಳಲ್ಲಿ 12.6 ಲಕ್ಷ ಲೀಟರ್ ಡೀಸೆಲ್ ಅನ್ನು (ಪ್ರತಿ ವ್ಯಾಗನ್‌ನಲ್ಲಿ 70 ಸಾವಿರ ಲೀ.) ಸಾಗಿಸುತ್ತಿತ್ತು. ಈ ಎಲ್ಲ ಡೀಸೆಲ್ ದಹಿಸಿ ಹೋಗಿದೆ
ಚೆನ್ನೈನಿಂದ ಕಾಂಚಿಪುರಂ ಸನಿಹದ ವಲಾಜಾಬಾದ್‌ಗೆ ಈ ಟ್ಯಾಂಕರ್ ರೈಲು ಡೀಸೆಲ್ ಒಯ್ಯುತ್ತಿತ್ತು. ತಿರುವಳ್ಳೂರು ನಿಲ್ದಾಣ ದಾಟಿ ಹೋಗುವಾಗ ಎಂಜಿನ್‌ನಿಂದ 3ನೇ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಇದನ್ನು ಗಮನಿಸಿದ ಚಾಲಕ, ಕೂಡಲೇ ತುರ್ತು ಬ್ರೇಕ್ ಅಳವಡಿಸಿದ್ದಾರೆ. ಇದೇ ಸಮಯದಲ್ಲಿ ರೈಲು ಹಳಿ ತಪ್ಪಿದ್ದು, ಅಷ್ಟರ ಹೊತ್ತಿಗೆ ಬೆಂಕಿ ಇನ್ನೂ 18 ಬೋಗಿಗಳಿಗೆ ವ್ಯಾಪಿಸಿದೆ. ಇದೇ ವೇಳೆ ಸ್ಟೇಷನ್ ಮಾಸ್ಟರ್ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ

