ಹೈದರಾಬಾದ್ : ‘ಪುಷ್ಪ-2’ ಸಿನಿಮಾದ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಗೆ ನ್ಯಾಯ ಕೋರಿ ಗುಂಪೊಂದು ನಾಯಕ ನಟ ಅಲ್ಲು ಅರ್ಜುನ್‌ರ ಹೈದ್ರಾಬಾದ್ ಮನೆ ಮೇಲೆ ಕಲ್ಲು, ಟೊಮೆಟೋ ತೂರಿ ದಾಳಿ ನಡೆಸಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್ ದಾಳಿ ನಡೆದಾಗ ಮನೇಲಿ ನಟನ ಕುಟುಂಬದ ಯಾವುದೇ ಸದಸ್ಯರು ಇರದ ಕಾರಣ ಅನಾಹುತ ತಪ್ಪಿದೆ. ಒಸ್ಮಾನಿಯಾ ವಿವಿಯ ಜಂಟಿ ಕಾರ್ಯಸಮಿತಿ ಸದಸ್ಯರು ಎನ್ನಲಾದವರ ತಂಡವೊಂದು ದಾಳಿ ನಡೆಸಿದೆ