ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರು ನಿನ್ನೆ ಶುಕ್ರವಾರ 97ನೇ ಹುಟ್ಟುಹಬ್ಬ ಆಚರಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು, ಅಭಿಮಾನಿಗಳು ಶುಭ ಕೋರಿದ್ದಾರೆ.
ಎಲ್.ಕೆ. ಆಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ದೇಶದ ಅತ್ಯಂತ ಮೆಚ್ಚುಗೆ ಪಡೆದ ರಾಜನೀತಿ ತಜ್ಞರಲ್ಲಿ ಆಡ್ವಾಣಿ ಒಬ್ಬರು. ಬುದ್ದಿವಂತಿಕೆ ಮತ್ತು ದೂರದೃಷ್ಟಿಯಿಂದಾಗಿ ಸದಾ ಅವರು ಗೌರವಿಸಲ್ಪಟ್ಟಿದ್ದಾರೆ. ಅವರ ಮಾರ್ಗದರ್ಶನವನ್ನು ಹಲವು ವರ್ಷಗಳಿಂದ ಪಡೆದಿರುವುದು ನನ್ನ ಅದೃಷ್ಟ ‘ಭಾರತ ರತ್ನ’ರಾಗಿರುವ ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಎಕ್ಸ್ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.