ನವದೆಹಲಿ : ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (97) ಅವರ ಆರೋಗ್ಯ ಹದಗೆಟ್ಟಿದ್ದು ಶುಕ್ರವಾರ ರಾತ್ರಿ ದೆಹಲಿಯ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಆಸ್ಪತ್ರೆ ‘ಸದ್ಯದ ಮಟ್ಟಿಗೆ ಅಡ್ವಾಣಿ ಯವರ ಆರೋಗ್ಯ ಸ್ಥಿರವಾಗಿದೆ. ನರ ಶಾಸ್ತ್ರಜ್ಞ ಡಾ| ವಿನೀತ್ ಸೂರಿ ಅವರು ಅಡ್ವಾಣಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಶನಿವಾರ ಮಧ್ಯಾಹ್ನ ಹೇಳಿದ್ದಾರೆ ಆದರೆ ಅಡ್ವಾಣಿ ಅವರಿಗೆ ಕಾಣಿಸಿಕೊಂಡ ಅನಾರೋಗ್ಯ ಏನೆಂಬುದನ್ನು ಅವರು ಹೇಳಿಲ್ಲ.
ಕಳೆದ ಕೆಲ ತಿಂಗಳಿನಿಂದ ಅಡ್ವಾಣಿ ಅವರು ಪದೇ ಪದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಜುಲೈ ನಂತರ ಅವರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು 4ನೇ ಬಾರಿ ಈ ಹಿಂದೆ ಅವರು ಅಪೋಲೋ ಆಸ್ಪತ್ರೆ ಮತ್ತು ದೆಹಲಿಯ ಏಮ್ಸ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಉಪ ಪ್ರ ಧಾನಿ ಆಗಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು ಈ ವರ್ಷದ ಆರಂಭದಲ್ಲಷ್ಟೇ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.