Home » ಏರ್‌ ಅಂಬುಲೆನ್ಸ್‌ ಕಾಪ್ಟರ್‌ ಪತನ
 

ಏರ್‌ ಅಂಬುಲೆನ್ಸ್‌ ಕಾಪ್ಟರ್‌ ಪತನ

by Kundapur Xpress
Spread the love

ಕೇದಾರನಾಥ : ಋಷಿಕೇಶ ಏಮ್ಸ್ ನಿಂದ ಕೇದಾರನಾಥಕ್ಕೆ ಬಂದಿದ್ದ ಏರ್ ಅಂಬುಲೆನ್ಸ್‌ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.

ಋಷಿಕೇಶ ಏಮ್ಸ್‌ನಿಂದ ತುರ್ತು ವೈದ್ಯಕೀಯ ಸೇವೆಯ ಅಡಿ ರೋಗಿಯನ್ನು ಕರೆದೊಯ್ಯಲು ಕೇದಾರನಾಥಕ್ಕೆ ಹೆಲಿಕಾಪ್ಟರ್ ಬಂದಿತ್ತು. ಇನ್ನೂ 20 ಮೀಟರ್ ದೂರದಲ್ಲಿರುವಾಗಲೇ ಹಿಂಭಾಗ ಮುರಿದು ಹೆಲಿಕಾಪ್ಟ‌ರ್ ಪತನಗೊಂಡಿದೆ.

ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಏ‌ರ್ ಆಂಬುಲೆನ್ಸ್‌ನಲ್ಲಿದ್ದ ಇಬ್ಬರು ವೈದ್ಯರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ.

ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ದೊರೆಯಬೇಕಿದೆ

 

Related Articles

error: Content is protected !!