Home » ದೆಹಲಿ ಶಾಂತಿಯುತ ಮತದಾನ : ಶೇ.59.71
 

ದೆಹಲಿ ಶಾಂತಿಯುತ ಮತದಾನ : ಶೇ.59.71

by Kundapur Xpress
Spread the love

ನವದೆಹಲಿ : ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.59.71 ರಷ್ಟು ಮತ ಚಲಾವಣೆಯಾಗಿದೆ. ಈ ಬಾರಿ ಮತದಾನ ಪೂರ್ಣ ಶಾಂತಿಯುತವಾಗಿ ನಡೆದಿದ್ದು, ರಾಜ್ಯದ ಮುಂದಿನ ಚುಕ್ಕಾಣಿ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಮತದಾರರು ತಮ್ಮ ನಿರ್ಧಾರವನ್ನು ಇವಿಎಂನೊಳಗೆ ದಾಖಲಿಸಿದ್ದಾರೆ. ಫೆ.8ರಂದು ಮತ ಎಣಿಕೆ ನಡೆಯಲಿದೆ. 2020ರಲ್ಲಿ ಶೇ.62.59ರಷ್ಟು ಮತದಾನವಾಗಿತ್ತು.

10 ವರ್ಷಗಳಿಂದ ಅಧಿಕಾರ ದಲ್ಲಿರುವ ಆಮ್‌ ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ, ಬಿಜೆಪಿ 27 ವರ್ಷಗಳ ಬಳಿಕ ಮತ್ತು ಕಾಂಗ್ರೆಸ್ 12 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ.

70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿ ಗಳು ಸ್ಪರ್ಧಿಸಿದ್ದು, 1.56 ಕೋಟಿ ಮತದಾರರು ಹಕ್ಕು ಚಲಾವಣೆಯ ಅವಕಾಶ ಪಡೆದಿದ್ದರು. ಬೆಳಗ್ಗೆ 7.00 ಕ್ಕೆ ಆರಂಭವಾದ ಮತದಾನ ಸಂಜೆ 6.00 ರವರೆಗೆ ನಡೆಯಿತು

 

Related Articles

error: Content is protected !!