83
ನವದಹಲಿ : ಹಾಂಕಾಂಗ್‌ನಿಂದ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ವಿಮಾನಕ್ಕಾಗಲೀ, ಪ್ರಯಾಣಿಕರಿಗಾಗಲೀ ಯಾವುದೇ ತೊಂದರೆ ಆಗಿಲ್ಲ.
ವಿಮಾನ ಬಂದಿಳಿಯುತ್ತಿದ್ದಂತೆ ಅದರ ಆ್ಯಕ್ಸಿಲರಿ ಪವರ್ ಯೂನಿಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡ ಹಿನ್ನೆಲೆಯಲ್ಲಿ ವಿಮಾನಕ್ಕೆ ವಿದ್ಯುತ್ ಪೂರೈಕೆ ಸ್ವಯಂ ಸ್ಥಗಿತಗೊಂಡಿದೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ವಿಮಾನದ ಸಿಬ್ಬಂದಿ ಕೆಳಗಿಳಿಸಿ ಕಳುಹಿಸಿದರು. ಈ ಕುರಿತು ಏರಿಂಡಿಯಾ ತನಿಖೆಗೆ ಆದೇಶಿಸಿದೆ. ಆ್ಯಕ್ಸಿಲರಿ ಪವರ್ ಯೂನಿಟ್ ಎನ್ನುವುದು ಗ್ಯಾಸ್ ಟರ್ಬೈನ್ ಎಂಜಿನ್ ಆಗಿದ್ದು, ವಿಮಾನದ ಮುಖ್ಯ ಎಂಜಿನ್‌ಗೂ ಮುನ್ನವೇ ಚಾಲನೆಗೊಂಡಿರುತ್ತದೆ. ಇದು ವಿಮಾನದ ಬ್ಯಾಕಪ್ ವಿದ್ಯುತ್ ಪೂರೈಕೆ ಘಟಕವಾಗಿಯೂ ಕಾರ್ಯನಿರ್ವಹಿಸುತ್ತದೆ.

