Home ರಾಷ್ಟ್ರೀಯ ಸುದ್ದಿವಂಚಕ ಚೋಕ್ಸಿ ಕೊನೆಗೂ ಬಂಧನ

ವಂಚಕ ಚೋಕ್ಸಿ ಕೊನೆಗೂ ಬಂಧನ

13,000 ಕೋಟಿ ವಂಚನೆ

by Kundapur Xpress

ನವದೆಹಲಿ: ಪಂಜಾಬ್ ಮತ್ತು ನ್ಯಾಷನಲ್ ಬ್ಯಾಂಕಿಗೆ 13000 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿ ಕಳೆದ 7 ವರ್ಷಗಳಿಂದ ನಾನಾ ದೇಶಗಳಲ್ಲಿ ನೆಲೆಸಿದ್ದ ವಜ್ರೋದ್ಯಮಿ ಮೇಹುಲ್ ಚೋಕ್ಸಿಯನ್ನು ಶನಿವಾರ ‘ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಚೋಕ್ತಿ ಸ್ವಿಜರ್ಲೆಂಡ್‌ ಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆ ಮೇರೆಗೆ ಬೆಲ್ಜಿಯಂ ಅಧಿಕಾರಿಗಳು ವಂಚಕನನ್ನು ಬಂಧಿಸಿದ್ದಾರೆ

ಬಂಧನದ ಬೆನ್ನಲ್ಲೇ ವೈದ್ಯಕೀಯ ಕಾರಣದಿಂದ ತನ್ನ ಗಡೀಪಾರು ಮಾಡಬಾರದು ಮತ್ತು ಜಾಮೀನು ನೀಡಬೇಕು ಎಂದು ಕೋರಿ ಚೋಕ್ಷಿ ಮೇಲ್ಮನವಿ ಸಲ್ಲಿಸಿದ್ದು ಅದಕ್ಕೆ ಮುನ್ನವೇ ಭಾರತೀಯ ತನಿಖಾಧಿಕಾರಿಗಳ ತಂಡವೊಂದು ಬೆಲ್ಸಿಯಂಗೆ ತೆರಳಲು ಸಜ್ಜಾಗಿದೆ.

ಒಂದು ವೇಳೆ ಗಡೀಪಾರು ಕುರಿತ ಭಾರತದ ಮನವಿಯನ್ನು ಬೆಲ್ಜಿಯಂ ಪುರಸ್ಕರಿಸಿದ್ದೇ ಆದಲ್ಲಿ, ಮುಂಬೈ ಸರಣಿ ದಾಳಿ ಪ್ರಕರಣದ ಉಗ್ರ ತಹಾವುರ್ ರಾಣಾನ ಬೆನ್ನಲ್ಲೇ ಭಾರತದ ರಾಜತಾಂತ್ರಿಕತೆಗೆ ಮತ್ತೊಂದು ದೊಡ್ಡ ಜಯ ಸಿಕ್ಕಂತೆ ಆಗಲಿದೆ.

Related Articles