ಅಹಮದಾಬಾದ್ : 18ನೇ ಆವೃತ್ತಿ ಐಪಿಎಲ್‌ಗೆ ಮಂಗಳವಾರ ಅಹಮದಾಬಾದ್ ಕ್ರೀಡಾಂಗಣದಲ್ಲಿ ತೆರೆ ಬಿತ್ತು ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ದೇಶ ಪ್ರೇಮದ ಅಲೆಯಲ್ಲಿ ತೇಲಾಡುವಂತೆ ಮಾಡಿತು. ಆಪರೇಷನ್ ಸಿಂದೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬಿಸಿಸಿಐ ಸಮಾರೋಪವನ್ನು ಭಾರತೀಯ ಸೇನೆಗೆ ಅರ್ಪಿಸಿತು
ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರ ಮುಂದೆ ಖ್ಯಾತ ಗಾಯಕ ಶಂಕರ್ ಮಹದೇವನ್ ಪ್ರೇಕ್ಷಕರ ಮುಂದೆ ‘ವಂದೇ ಮಾತರಂ’, ‘ಏ ವತನ್ ವತನ್ ಮೇರೇ ಆಬಾದ್ ರಹೇ ತು ಸೇರಿದಂತೆ ಹಲವು ದೇಶಭಕ್ತಿ ಹಾಡುಗಳನ್ನು ಹಾಡಿದರು. ಅವರ ಇಬ್ಬರು ಮಕ್ಕಳಾದ ಸಿದ್ದಾರ್ಥ್ ಹಾಗೂ ಶಿವಂ ಕೂಡಾ ಕಾರ್ಯಕ್ರಮದಲ್ಲಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಭಾರತದ ಧ್ವಜ ಹಿಡಿದು, ತ್ರಿವರ್ಣದ ಬಟ್ಟೆ ಧರಿಸಿದ್ದನೃತ್ಯಪಟುಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಅತ್ಯಾಕರ್ಷಕ ಏರ್‌ಶೋ ಸಮಾರಂಭದ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು
ಈ ವೇಳೆ ಕ್ರೀಡಾಂಗಣದ ಹಲವೆಡೆ ಭಾರತೀಯ ಸಶಸ್ತ್ರ ಪಡೆಗೆ ಸಲ್ಯೂಟ್’ ಭಾರತೀಯ ಸೇನೆಗೆ ಅಭಿನಂದನೆಗಳು’ ಎಂದು ಬರೆದಿರುವ ಫಲಕಗಳನ್ನು ಪ್ರದರ್ಶಿಸಲಾಯಿತು.

