ಕುಂದಾಪುರ : ಜೀವನ ಮೌಲ್ಯಗಳು ಆರೋಗ್ಯ ಮೌಲ್ಯವನ್ನು ವೃದ್ಧಿಸುತ್ತವೆ. ಹಿಂದಿನ ಎಲ್ಲಾ ಸಂಸ್ಕಾರ, ಸಂಸ್ಕೃತಿ, ಆಹಾರ ಪದ್ಧತಿಗಳೆಲ್ಲವೂ ಮನುಷ್ಯನ ಆರೋಗ್ಯಪೂರ್ಣ ಜೀವನಕ್ಕೆ ಪೂರಕವಾದವುಗಳೇ. ಹೀಗಾಗಿ ಪುರಾತನ ಸಂಸ್ಕಾರಯುತ ಜೀವನವನ್ನು ರೂಡಿಸಿಕೊಳ್ಳುವ ಮೂಲಕ ಸ್ವಾಸ್ತ್ಯ ಆರೋಗ್ಯಪೂರ್ಣ ಬದುಕನ್ನು ಅನುಭವಿಸುವಂತಾಗಬೇಕು ಎಂದು ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ| ಮಮತಾ ಕೆ.ವಿ. ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಮಾಲಿಕೆ – 5ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಆಡಳಿತ ನಿಕಾಯಕರು ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಶ್ಮಿತಾ ಸ್ವಾಗತಿಸಿ, ರಚನಾ ಅತಿಥಿಗಳನ್ನು ಪರಿಚಯಿಸಿ, ಐಶ್ವರ್ಯ ವಂದಿಸಿ, ಅಕ್ಷಿತಾ ನಿರೂಪಿಸಿದರು.

