ಅರ್ಲಿಂಗ್ಟನ್ : ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ಮತ್ತು ಪ್ರಯಾಣಿಕ ಜೆಟ್ ವಿಮಾನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಲ್ಲ 67 ಮಂದಿ ಪ್ರಯಾಣಿಕರು ಬಲಿಯಾಗಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ. ಈ ನಡುವೆ ಮೃತರಲ್ಲಿ ಅನಿವಾಸಿ ಭಾರತೀಯ ಮಹಿಳೆ ಅಸ್ರಾ ಹುಸೇನ್ (26) ಕೂಡ ಸೇರಿದ್ದಾರೆ. ಆಸ್ರಾ, ದುರಂತಕ್ಕೂ ಮುನ್ನ ತನ್ನ ಪತಿಗೆ ಇನ್ನು 20 ನಿಮಿಷಗಳಲ್ಲಿ ವಿಮಾನದಿಂದ ಇಳಿಯಲಿದ್ದೇನೆ ಎನ್ನುವ ಸಂದೇಶ ಕಳುಹಿಸಿದ್ದರು.