70
ನವದೆಹಲಿ: ಅಮರನಾಥ ಯಾತ್ರೆ ಸುಗಮವಾಗಿ ನಡೆಸುವ ಸಲುವಾಗಿ ಭಾರತೀಯ ಸೇನೆಯು ‘ಆಪರೇಷನ್ ಶಿವ’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇದರ ಡಿಯಲ್ಲಿ ಸುರಕ್ಷತೆಗಾಗಿ ಸೇನೆಯು 8500 ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ.
ಜತೆಗೆ ವಾಯುದಾಳಿ ನಿಯಂತ್ರಿಸುವ ವ್ಯವಸ್ಥೆ, ವಿದ್ಯುನ್ಮಾನ ಶಸ್ತ್ರಾಸ್ತ್ರಗಳು ಸೇರಿ ಅನೇಕ ಸಿದ್ಧತೆ ಕೈಗೊಂಡಿದೆ. ಇದಿಷ್ಟೇ ಅಲ್ಲದೆ ಸ್ಥಳೀಯ ಆಡಳಿತದ ಸಹಕಾರದೊಂದಿಗೆ 150 ವೈದ್ಯರು, 2 ಅತ್ಯಾಧುನಿಕ ಡೆಸ್ಸಿಂಗ್ ರೂಂಗಳು, 100 ಹಾಸಿಗೆ ಉಳ್ಳ ಆಸ್ಪತ್ರೆ, 2 ಲಕ್ಷ ಲೀಟರ್ ಸಾಮರ್ಥ್ಯದ 26 ಆಮ್ಲಜನಕ ಬೂತ್‌ಗಳನ್ನು ತೆರೆಯಲಾಗಿದೆ. ಜತೆಗೆ ಪ್ರಾಕೃತಿಕ ವಿಕೋಪ ಎದುರಿಸಲು ಎಸ್ಕವೇಟರ್‌ಗಳು ಸೇರಿ ತುರ್ತು ಸ್ಪಂದನಾ ಪಡೆಗಳನ್ನು ನಿಯೋಜಿಸಲಾಗಿದೆ.

