ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ 2025ರಲ್ಲಿ 75 ತುಂಬಲಿದ್ದು, ಪ್ರಧಾನಿ ಹುದ್ದೆಯನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಟ್ಟುಕೊಡಲಿದ್ದಾರೆ ಎಂಬ ಆಪ್ ನೇತಾರ ಅರವಿಂದ ಕೇಜ್ರವಾಲ್ ಹೇಳಿಕೆಯನ್ನು ಖುದ್ದು ಶಾ ಹಾಗೂ ರಕ್ಷಣಾ ಸಚಿವ ರಾಜನಾಥ ತಳ್ಳಿ ಹಾಕಿದ್ದಾರೆ. ‘ಮತ್ತೆ ಪೂರ್ಣಾವಧಿಗೆ ಮೋದಿಯೇ ಪ್ರಧಾನಿ’ ಎಂದು ಅವರಿಬ್ಬರೂ ಸ್ಪಷ್ಟಪಡಿಸಿದ್ದಾರೆ. ಹೈದರಾಬಾದ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾ, ‘ಕೇಜ್ರವಾಲ್ ಅವರು ಬಿಜೆಪಿ ಗೆದ್ದರೆ ಅಮಿತ್ ಶಾ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ