ಸೆರಾಮ್‌ಪೂರ್ (ಪ.ಬಂ.) : ಕಾಂಗ್ರೆಸ್ ಚುನಾವಣೆ ‘ಯಲ್ಲಿ ನೀಡುತ್ತಿರುವ ಗ್ಯಾರಂಟಿಗಳೆಲ್ಲ “ಚೈನೀಸ್ ಗ್ಯಾರಂಟಿ’ಗಳಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ನೀಡಿರುವ ಭರವಸೆಗಳು ದೇಶದ ವಿಕಾಸಕ್ಕೆ ಪುಷ್ಟಿ ನೀಡುವಂತಹ ಸದೃಢ ಗ್ಯಾರಂಟಿಗಳಾಗಿವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಳಂಕವಿಲ್ಲದಿರುವುದೇ ಅವರ ವಿಶ್ವಾಸಾರ್ಹತೆಗೆ ಸಾಕ್ಷಿ. ದೇಶಕ್ಕೆ ಭ್ರಷ್ಟ ಕಾಂಗ್ರೆಸ್-ಐಎನ್ ಡಿಐಎ ಕೂಟದ ಆಡಳಿತ ಬೇಕೇ ಅಥವಾ ಮೋದಿಯವರಂತಹ ಪ್ರಾಮಾಣಿಕ ನಾಯಕ ಬೇಕೇ ಎಂಬುದನ್ನು ನಿರ್ಧರಿಸುವ ಚುನಾವಣೆ ಇದು ಎಂದು ಶಾ ಹೇಳಿದರು.
ಪಶ್ಚಿಮ ಬಂಗಾಲದ ಸೆರಾಮ್ ಪೂರ್‌ನಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಒಂದೊಮ್ಮೆ ಹಿಂಸಾಗ್ರಸ್ತವಾಗಿದ್ದ ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ (2019ರಲ್ಲಿ) ಬಳಿಕ ಕಣಿವೆ ರಾಜ್ಯವಿಂದು ಶಾಂತಿಯೆಡೆಗೆ ಮರಳಿರುವುದು ಮೋದಿ ಆಡಳಿತಕ್ಕೊಂದು ನಿದರ್ಶನವಾಗಿದೆ