Home » ಪ್ರತ್ಯೇಕತಾವಾದಕ್ಕೆ 3 ಹುರಿಯತ್ ಬಣ ತಿಲಾಂಜಲಿ
 

ಪ್ರತ್ಯೇಕತಾವಾದಕ್ಕೆ 3 ಹುರಿಯತ್ ಬಣ ತಿಲಾಂಜಲಿ

ಅಮಿತ್‌ ಶಾ ಹರ್ಷ

by Kundapur Xpress
Spread the love

ನವದೆಹಲಿ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದದ ವಿರುದ್ಧದ ಭಾರತದ ಹೋರಾಟಕ್ಕೆ ಮೊದಲ ಜಯ ದೊರೆತಿದ್ದು, 3 ಹುರಿಯತ್ ಸಂಘಟನೆಗಳು ಪ್ರತ್ಯೇಕವಾದದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿವೆ.

ಹುರಿಯತ್‌ನ 2 ಘಟಕಗಳಾದ ಜೆ-ಕೆ ಪೀಪಲ್ ಮೂವ್‌ಮೆಂಟ್ ಮತ್ತು ಡೆಮಾಕ್ರೆಟಿಕ್ ಪೊಲಿಟಿಕಲ್‌ ಮೂವ್‌ಮೆಂಟ್ ಸಂಘಟನೆಗಳು ಹಾಗೂ ಜಮ್ಮು ಕಾಶ್ಮೀರ ಫ್ರೀಡಂ ಮೂಮೆಂಟ್ ಪಕ್ಷಗಳು ಪ್ರತ್ಯೇಕವಾದವನ್ನು ಕೈಬಿಡುವುದಾಗಿ ಹೇಳಿವೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಮಾಹಿತಿ ನೀಡಿದ್ದು, ಇದು ಪ್ರತ್ಯೇಕತಾವಾದ ವಿರುದ್ಧದ ಹೋರಾಟಕ್ಕೆ ಮೊದಲ ಯಶ. ಪ್ರತ್ಯೇಕತಾವಾದ ಇನ್ನು ಇತಿಹಾಸವಾಗಲಿದೆ ಎಂದಿದ್ದಾರೆ.

ಸಂಘಟನೆಗಳ ಈ ನಿರ್ಧಾರವನ್ನು ಸ್ವಾಗತಿಸಿರುವ ಅಮಿತ್ ಶಾ, ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಈ ನಿರ್ಧಾರ ಇತಿಹಾಸ ನಿರ್ಮಿಸಿದೆ. ಮೋದಿ ಸರ್ಕಾರದ ನಿರ್ಧಾ ರಗಳಿಂದ ಇದು ಸಾಧ್ಯವಾಗಿದೆ. ಅಭಿವೃದ್ಧಿ ಹೊಂದಿದ, ಶಾಂತಿಯುತ ಮತ್ತು ಏಕೀಕೃತ ಭಾರತವನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಇದು ದೊಡ್ಡ ಗೆಲುವು ಎಂದು ಹೇಳಿದರು.

 

Related Articles

error: Content is protected !!