92
ಪುಣೆ : ಛತ್ರಪತಿ ಶಿವಾಜಿ ಮಹಾರಾಜ್ ಮಹಾರಾಷ್ಟ್ರಕ್ಕೆ ಸೀಮಿತವಾಗಬಾರದು. ಅವರ ಮಾತೃಭೂಮಿಗೆ ಸೇವೆ ಮತ್ತು ಉತ್ತಮ ಆಡಳಿತದ ಆದರ್ಶವಾಗಿರುವ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಕಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅವರ ಪುಣ್ಯತಿಥಿಯಂದು ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ಶಿವಾಜಿಯ ಕಥೆಯನ್ನು ಪ್ರತಿಯೊಬ್ಬ ಭಾರತೀಯನಿಗೂ ಕಲಿಸಬೇಕು. ಇದನ್ನು ಪ್ರತಿ ಮಗುವಿಗೆ ಕಲಿಸಬೇಕು. ಶಿವಾಜಿ ಮಹಾರಾಜರನ್ನು ಮಹಾರಾಷ್ಟ್ರಕ್ಕೆ ಸೀಮಿತಗೊಳಿಸಬೇಡಿ. ದೇಶ ಮತ್ತು ಜಗತ್ತು ಅವರಿಂದ ಸ್ಫೂರ್ತಿ ಪಡೆಯುತ್ತಿದೆ ಎಂದಿದ್ದಾರೆ

