Home » ದಾಳಿ ಬೆನ್ನಲ್ಲೇ ಕಾಶ್ಮೀರಕ್ಕೆ ಅಮಿತ್ ಶಾ ದೌಡು
 

ದಾಳಿ ಬೆನ್ನಲ್ಲೇ ಕಾಶ್ಮೀರಕ್ಕೆ ಅಮಿತ್ ಶಾ ದೌಡು

by Kundapur Xpress
Spread the love

ಶ್ರೀನಗರ : ಜಮ್ಮು-ಕಾಶ್ಮೀರದ ಪಹಾಲ್ಗಾಮನಲ್ಲಿ ಪ್ರವಾಸಿಗರ ಮೇಲಿನ ಉಗ್ರ ದಾಳಿ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರಕ್ಕೆ ದೌಡಾಯಿಸಿದ್ದಾರೆ. ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಟನೆ ಕುರಿತು ವಿವರ ನೀಡಿದ ಬಳಿಕ ಶ್ರೀನಗರಕ್ಕೆ ಆಗಮಿಸಿದ ಶಾ, ಕೇಂದ್ರೀಯ ಭದ್ರತಾ ಪಡೆಗಳು, ಜಮ್ಮು ಕಾಶ್ಮೀರ ಪೊಲೀಸರ ಜೊತೆ ತುರ್ತು ಸಭೆಗಳನ್ನು ನಡೆಸಿದರು. ಅಲ್ಲದೆ, ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಪರಿಸ್ಥಿತಿಯ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ನಲ್ಲಿ ಮೋದಿ ಅವರಿಗೆ ಸಂಪೂರ್ಣ ವಿವರ ನೀಡಿದ್ದೇನೆ ಎಂದಿದ್ದಾರೆ.

 

Related Articles

error: Content is protected !!