Home » ಅಣ್ಣಾಮಲೈ ಸ್ವಯಂ ದಂಡನೆ : 8 ಛಡಿಯೇಟು
 

ಅಣ್ಣಾಮಲೈ ಸ್ವಯಂ ದಂಡನೆ : 8 ಛಡಿಯೇಟು

by Kundapur Xpress
Spread the love

ಕೊಯಮತ್ತೂರು : ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಡಿ.3ರಂದು ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಪೊಲೀಸರು ನಿಭಾಯಿಸುತ್ತಿರುವ ರೀತಿ ಹಾಗೂ ಡಿಎಂಕೆ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತಮಗೆ ತಾವೇ ಚಾಟಿಯಿಂದ ಹೊಡೆದುಕೊಂಡು ಶುಕ್ರವಾರ ಪ್ರತಿಭಟಿಸಿದ್ದಾರೆ.

ಅತ್ಯಾಚಾರ ಪ್ರಕರಣದ ಸಂಬಂಧ ದಾಖಲಾದ ಎಫ್‌ಐಆರ್ ಅನ್ನು ಪೊಲೀಸರು ಸೋರಿಕೆ ಮಾಡಿದ್ದಾರೆ ಹಾಗೂ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿದ ಅಣ್ಣಾಮಲೈ, ತಮ್ಮ ನಿವಾಸದ ಎದುರು ಹಸಿರು ಪಂಚೆ ಹಾಗೂ ಶಲ್ಯ ಉಟ್ಟು, ಕೈಯ್ಯಲ್ಲಿ ಚಾಟಿ ಹಿಡಿದು 8 ಸಲ ತಮಗೆ ತಾವೇ ಥಳಿಸಿಕೊಂಡಿದ್ದಾರೆ. ಈ ವೇಳೆ ಅವರ ಹಿಂದಿದ್ದ ಕೆಲ ಬಿಜೆಪಿ ನಾಯಕರು ಅತ್ಯಾಚಾರವನ್ನು ಖಂಡಿಸುವ ಬರಹಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಅಣ್ಣಾಮಲೈ 8 ಚಾಟಿಯೇಟು ಬೀಸುತ್ತಿದ್ದಂತೆಯೇ ಅವರಿಗೆ ಬೆಂಬಲಿಗರೊಬ್ಬರು ಅಪ್ಪಿಕೊಂಡು ರಕ್ಷಣೆ ನೀಡಿದರು. ಈ ನಡುವೆ ಬಿಜೆಪಿ ಮಹಿಳಾ ಘಟಕದ ಸದಸ್ಯೆಯರು ಆಗಮಿಸಿ ಅಣ್ಣಾಮಲೈ ಅವರಿಗೆ ಇಂಥ ಶಿಕ್ಷೆ ವಿಧಿಸಿಕೊಳ್ಳಬೇಡಿ ಎಂದು ಬೇಡಿಕೊಂಡರು.

ಇದು ಅನ್ಯಾಯ ವಿರೋಧಿಸುವ ವಿಧಾನ :

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ‘ನಮ್ಮನ್ನು ನಾವೇ ಶಿಕ್ಷಿಸಿಕೊ ಳ್ಳುವುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅನ್ಯಾಯವನ್ನು ವಿರೋಧಿಸುವ ರೀತಿಯಾಗಿದೆ. ಸಾಮಾನ್ಯ ಜನರಿಗೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದರು. ಬಳಿಕ ಎಫ್‌ಐಆರ್ ಸೋರಿಕೆ ಬಗ್ಗೆ ಮಾತನಾಡಿದ ಅವರು, ‘ಪೊಲೀಸರು ಹೇಳುತ್ತಿರುವಂತೆ ತಾಂತ್ರಿಕ ಸಮಸ್ಯೆಯಿಂದ ಅದು ಸೋರಿಕೆಯಾಗಿಲ್ಲ. ಬದಲಿಗೆ ಉದ್ದೇಶಪೂರ್ವ ಅದನ್ನು ಬಹಿರಂಪಡಿಸಲಾಗಿದೆ’ ಎಂದು ಆರೋಪಿಸಿದರು.

ಈ ಮೊದಲು, ಡಿಎಂಕೆ ಸರ್ಕಾರ ಅಧಿಕಾರದಿಂದ ತೆಗೆದುಹಾಕುವ ವರೆಗೆ ತಾವು ಪಾದರಕ್ಷೆ ಧರಿಸುವುದಿಲ್ಲ  ಹಾಗೂ 48 ದಿನ ಉಪವಾಸ ವ್ರತ ಮಾಡುವೆ ಹಾಗೂ ಈ ಅವಧಿಯಲ್ಲಿ ತಮಿಳುನಾಡಿನಲ್ಲಿರುವ ಮುರುಗನ್ ಕ್ಷೇತ್ರಗಳಿಗೆ ಭೇಟಿ ನೀಡುವೆ ಎಂದು ಎಂದು ಅಣ್ಣಾಮಲೈ ಘೋಷಿಸಿದ್ದರು

 

Related Articles

error: Content is protected !!