159
ಮಹಾರಾಷ್ಟ್ರ : ಜಮ್ಮು-ಕಾಶ್ಮೀರದಿಂದ ಭಾರತದ ಸಂವಿಧಾನ ತೆಗೆದುಹಾಕಲು ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಮೈತ್ರಿಕೂಟ ಬಯಸುತ್ತಿದೆ ಆದರೆ ಜಗತ್ತಿನ ಯಾವುದೇ ಶಕ್ತಿಯಿಂದಲೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಧುಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದು, ಜನರಿಗೆ ಒಗ್ಗಟ್ಟಾಗಿರಲು ಕರೆ ನೀಡಿದ್ದಾರೆ ಒಗ್ಗಟ್ಟಾಗಿದ್ದರೆ ಸುರಕ್ಷವಾಗಿರುತ್ತೀರಿ ಎಂದು ಜನರಿಗೆ ಸಾರ್ವಜನಿಕ ಸಮಾವೇಶದಲ್ಲಿ ಕರೆ ನೀಡಿದ ಮೋದಿಯವರು, ದಲಿತರು ಮತ್ತು ಆದಿವಾಸಿಗಳನ್ನು ಕೆರಳಿಸಲು ಖಾಲಿ ಪುಸ್ತಕಗಳನ್ನು ತೋರಿಸಿ ಸಂವಿಧಾನ ಎಂದು ವಿಪಕ್ಷ ನಾಯಕರು ರವಾನಿಸುತ್ತಿದ್ದಾರೆ ಎಂದು ಆರೋಪಿಸಿದರು.

