Home » ಸಲ್ಮಾನ್‌ಗೆ ಮತ್ತೆ ಬೆದರಿಕೆ ಸಂದೇಶ
 

ಸಲ್ಮಾನ್‌ಗೆ ಮತ್ತೆ ಬೆದರಿಕೆ ಸಂದೇಶ

ಕಾರು ಸ್ಫೋಟ, ಮನೆಗೆ ನುಗ್ಗಿ ಥಳಿತ

by Kundapur Xpress
Spread the love

ಮುಂಬೈ : ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ ಬಂದಿದ್ದು, ಸಲ್ಮಾನ್ ಕಾರು ಸ್ಫೋಟಿಸುತ್ತೇವೆ. ಅವರ ಮನೆ ಮೇಲೆ ದಾಳಿ ಮಾಡುತ್ತೇವೆ ಎಂದು ಅಪರಿಚಿತರು ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ. ಸಂದೇಶ ಕಳಿಸಿದ ಅಪರಿಚಿತನ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

ಕಳೆದ ಕೆಲ ತಿಂಗಳಲ್ಲಿ ಇದೇ ರೀತಿ ಅನೇಕ ಬೆದರಿಕೆ ಸಂದೇಶಗಳು ಬಂದಿವೆ. ಲಾರೆನ್ಸ್ ಬಿಷ್ಟೋಯಿ ತಂಡದ ಸದಸ್ಯರು ಕಳೆದ ಏಪ್ರಿಲ್‌ನಲ್ಲಿ ಸಲ್ಮಾನ್ ಮನೆಯ ಹೊರಗೆ ಗುಂಡು ಹಾರಿಸಿದ್ದರು.ಸಲ್ಲು,ಪನ್ವೇಲ್‌ನ ತೋಟದ ಮನೆಗೆ ತೆರಳುತ್ತಿದ್ದಾಗ ಬಿಷ್ಟೋಯಿ ಗ್ಯಾಂಗ್‌ ಹಿಂಬಾಲಿಸಿ ಹತ್ಯೆಗೆ ಸಂಚು ರೂಪಿಸಿತ್ತು ಎನ್ನುವುದು ತನಿಖೆಯಲ್ಲಿ ಬಯಲಾಗಿತ್ತು ಇದೀಗ ಮತ್ತೆ ಬೆದರಿಕೆ ಕರೆ ಬಂದಿದೆ

 

Related Articles

error: Content is protected !!