Home » ಶುಭಾಂಶು ಸೇರಿ 4 ಗಗನಯಾನಿಗಳ ಶುಭಾಗಮನ
 

ಶುಭಾಂಶು ಸೇರಿ 4 ಗಗನಯಾನಿಗಳ ಶುಭಾಗಮನ

by Kundapur Xpress
Spread the love

ನವದೆಹಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐ ಎಸ್ ಎಸ್) ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಇನ್ನೂ ಮೂವರು ಅಂತರಿಕ್ಷಯಾನಿಗಳು ಮಂಗಳವಾರ ಮಧ್ಯಾಹ್ನ 3.01ಕ್ಕೆ ಭೂಮಿಗೆ ಮರಳಿದ್ದಾರೆ.

ಇದನ್ನು ಭಾರತದ ಭವಿಷ್ಯದ ಮಾನವ ಸಹಿತ ಗಗನಯಾನ ಯೋಜನೆ ಹಾಗೂ ಭಾರತದ್ದೇ ಆದ ಅಂತರಿಕ್ಷ ಕೇಂದ್ರ ನಿರ್ಮಾಣದ ಕನಸಿನತ್ತ ಪ್ರಮುಖ ಹೆಜ್ಜೆ ಎಂದೇ ಬಣ್ಣಿಸಲಾಗಿದೆ. ಏಕೆಂದರೆ ಗಗನಯಾನದ ಮುಂದಿನ ಯೋಜನೆಗಳು ಶುಕ್ಲಾ ನೇತೃತ್ವದಲ್ಲಿ ನಡೆಯುವ ನಿರೀಕ್ಷೆ ಇದೆ.

20 ದಿನಗಳ (433 ಗಂಟೆ) ಬಾಹ್ಯಾಕಾಶ ಯಾನ (2 ದಿನ ಪ್ರಯಾಣ+18 ದಿನ ಅಂತರಿಕ್ಷ ವಾಸ) ಮುಗಿಸಿ 22.5 ಗಂಟೆ ಪ್ರಯಾಣದ ಬಳಿಕ ಗಗನಯಾತ್ರಿಗಳು ಮಾತೃಗ್ರಹಕ್ಕೆ ಮರಳಿದ್ದು, ಅವರನ್ನು ಹೊತ್ತುತಂದ ಡ್ಯಾಗನ್ ಗ್ರೇಸ್ ಬಾಹ್ಯಾಕಾಶ ನೌಕೆಯು ಕ್ಯಾಲಿ ಫೋರ್ನಿಯಾ ಸಮೀಪದ ಸ್ಯಾನ್. ಡಿಯಾಗೋದ ಪಿಸಿಫಿಕ್ ಸಾಗರದಲ್ಲಿ ಸುರಕ್ಷಿತವಾಗಿ ಲ್ಯಾಷ್ ಲ್ಯಾಂಡ್ ಆಗಿದೆ.

ನೌಕೆಯು ಸೋಮವಾರ ಸಂಜೆ 4.45ಕ್ಕೆ ಐಎಸ್ ಎಸ್‌ನಿಂದ ಬೇರ್ಪಟ್ಟು ತನ್ನ ಪ್ರಯಾಣ ಆರಂಭಿಸಿತ್ತು

 

Related Articles

error: Content is protected !!