115
ಕರಾಚಿ : ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಷೇರು ಪೇಟೆ ತತ್ತರಿಸಿದ್ದು, ಒಂದೇ ದಿನ 6,200 ಅಂಕಗಳ ಕುಸಿತವಾಗಿದೆ. ಪಾಕಿಸ್ತಾನ ಷೇರು ವಿನಿಮಯ ಕೇಂದ್ರ ಪಿಎಸ್‌ಎಕ್ಸ್ ಸೂಚ್ಯಂಕ ಬುಧವಾರ ಒಂದೇ ದಿನ ಬರೊಬ್ಬರಿ 6560.82 ಅಂಕಗಳು ಅಂದರೆ ಶೇ.5.78 ರಷ್ಟು ಕುಸಿದಿದ್ದು 107,007.68ಕ್ಕೆ ತಲುಪಿತು. ಭಾರಿ ಕುಸಿತದಿಂದಾಗಿ, ಮಾರುಕಟ್ಟೆಯನ್ನು ತಕ್ಷಣವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

