61
ನವದೆಹಲಿ : ಎಲ್ಲರಿಗೂ ಬಾಹ್ಯಾಕಾಶದಿಂದ ನನ್ನ ನಮಸ್ಕಾರಗಳು. ನನ್ನ ಸಹದ್ಯೋಗಿಗಳ ಜತೆ ಅದ್ಭುತ ಪ್ರಯಾಣ ಅನುಭವ ಪಡೆದಿದ್ದೇನೆ. ಏಕಾಏಕಿ ಏನೂ ಇಲ್ಲದ ಸ್ಥಿತಿಯಲ್ಲಿ ನಾವೆಲ್ಲರೂ ತೇಲುತ್ತಿದ್ದೆವು. ಮತ್ತೊಮ್ಮೆ ಪುಟ್ಟ ಮಗುವಿನಂತೆ ಬಾಹ್ಯಾಕಾಶದಲ್ಲಿ ನಡೆದಾಡಲು, ಆಹಾರ ಸೇವಿಸಲು ಕಲಿಯುತ್ತಿದ್ದೇನೆ.
ಪ್ರೀತಿಯ ಭಾರತೀಯರಿಗೆ ನನ್ನ ಪುಟ್ಟ ಸಂದೇಶ – ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದೇನೆ. ಇದು ಬಹಳ ಸುಲಭವೆಂದು ನಿಮಗೆ ಅನಿಸಬಹುದು, ಆದರೆ ನನ್ನ ತಲೆ ಸ್ವಲ್ಪ ಭಾರವಾದಂಥ ಅನುಭವ ಆಗುತ್ತಿದೆ, ಅದೆಲ್ಲಾ ದೊಡ್ಡ ವಿಷಯವೇನಲ್ಲ. ಮುಂದಿನ ದಿನಗಳಲ್ಲಿ ಇವೆಲ್ಲವೂ ನಮಗೆ ಅಭ್ಯಾಸವಾಗಲಿದೆ ಎಂದು ವಾಯುಪಡೆ ಪೈಲಟ್ ಮತ್ತು ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಅನುಭವ ಹಂಚಿಕೊಂಡಿದ್ದಾರೆ.

