Home » ದೇಶಿ ಅಂತರಿಕ್ಷ ನಿಲ್ದಾಣ ಕನಸಿಗೆ ಭಾರಿ ಬಲ
 

ದೇಶಿ ಅಂತರಿಕ್ಷ ನಿಲ್ದಾಣ ಕನಸಿಗೆ ಭಾರಿ ಬಲ

ಭಾರತದ ಮಾನವ ಸಹಿತ ಗಗನಯಾನ ಯಶಸ್ವಿ

by Kundapur Xpress
Spread the love

ನವದೆಹಲಿ : ಹಲವು ದಿನಗಳ ಕಾಯುವಿಕೆಗೆ ತೆರೆ ಬಿದ್ದಿದೆ. ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದ್ದು ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದೆ. ಬೆಂಗಳೂರಿನ ಐಐಎಸ್ಸಿಯಲ್ಲಿ ವ್ಯಾಸಂಗ ಮಾಡಿರುವ ಶುಭಾಂಶು ಶುಕ್ಲಾ ಅಮೆರಿಕದ ಆ್ಯಕ್ಸಿಯೋಂ ನೌಕೆ ಮೂಲಕ ಗುರುವಾರ ಸಂಜೆ ಅಂತರಿಕ್ಷ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿದ್ದಾರೆ.

ತನ್ಮೂಲಕ ಈ ಸಾಧನೆ ಮಾಡಿದ ಮೊದಲ ಹಾಗೂ ಬಾಹ್ಯಾಕಾಶ ಯಾತ್ರೆ ಕೈಗೊಂಡ ಎರಡನೇ ಭಾರತೀಯ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. 14 ದಿನಗಳ ಕಾಲ ಅಲ್ಲಿ ಸಂಶೋಧನೆ ಮುಗಿಸಿ ಶುಭಾಂಶು ಭೂಮಿಗೆ ಮರಳಲಿದ್ದಾರೆ. ಅವರ ಈ ಯಾತ್ರೆಯಿಂದ ಭಾರತದ ಮಾನವಸಹಿತ ಗಗನಯಾನ ಹಾಗೂ ದೇಶಿ ಅಂತರಿಕ್ಷ ನಿಲ್ದಾಣ ಕನಸಿಗೆ ಭಾರಿ ಬಲ ಸಿಗಲಿದೆ

 

Related Articles

error: Content is protected !!