ಅಯೋಧ್ಯೆ : ಐತಿಹಾಸಿಕ ಮಹಾ ಕುಂಭಮೇಳ ನಡೆಯುವ ಧಾರ್ಮಿಕ ನಗರಿ ಪ್ರಯಾಗ್ ರಾಜ್‌ನಿಂದ 165 ಕಿಮೀ ದೂರವಿರುವ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಧಾರ್ಮಿಕ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ.
ಶ್ರೀರಾಮ ಜನ್ಮಭೂಮಿಯ ಅಯೋಧ್ಯೆಯಲ್ಲಿ ರಾಮಲಲಾ ಮೂರ್ತಿ ಪ್ರತಿಷ್ಠಾಪನೆಯಾಗಿ ಜನವರಿ 11ಕ್ಕೆ ಪಂಚಾಂಗ ಪ್ರಕಾರ ಒಂದು ವರ್ಷ ಪೂರೈಸಲಿದ್ದು ಶ್ರೀರಾಮನ ಪ್ರಥಮ ವರ್ಷದ ಪ್ರತಿಷ್ಠಾನ ದ್ವಾದಶಿ ಉತ್ಸವ ಆಚರಿಸಲು ಶ್ರೀರಾಮ ಜನ್ಮಭೂಮಿ ಮಂದಿರದ ಸಮಿತಿ ನಿರ್ಧರಿಸಿದೆ. ಮಹಾ ಕುಂಭಮೇಳ ಹಾಗೂ ಶ್ರೀರಾಮನ ಪ್ರಥಮ ವರ್ಷದ ಪ್ರತಿಷ್ಠಾನ ದ್ವಾದಶಿ ಉತ್ಸವ ಒಟ್ಟಿಗೆ ಬಂದಿದ್ದು ಇದಕ್ಕೆ ಕೋಟ್ಯಂತರ ಜನರು ಸಾಕ್ಷಿಯಾಗಲಿದ್ದು ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಹ ಭಾಗವಹಿಸಲಿದ್ದಾರೆ.
ಶ್ರೀರಾಮ ಪ್ರತಿಷ್ಠಾನ ದ್ವಾದಶಿ ಉತ್ಸವ ಆಚರಣೆ ಅಯೋಧ್ಯೆಯಲ್ಲಿ ಜನವರಿ 11, 12 ಹಾಗೂ 13 ಸೇರಿ ಮೂರು ದಿನ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ