Home » ಅಯೋಧ್ಯೆಯಲ್ಲಿ ಸಂಭ್ರಮದ ರಾಮನವಮಿ
 

ಅಯೋಧ್ಯೆಯಲ್ಲಿ ಸಂಭ್ರಮದ ರಾಮನವಮಿ

ಶ್ರೀರಾಮನ ಹಣೆಗೆ ಸೂರ್ಯರಶ್ಮಿಯ ಸಿಂಚನ

by Kundapur Xpress
Spread the love

ಅಯೋಧ್ಯೆ : ಅಯೋಧ್ಯೆಯಲ್ಲಿ ಸಂಭ್ರಮದ ರಾಮನವಮಿ ಆಚರಿಸಲಾಯಿತು ಅಯೋಧ್ಯೆಯ. ಭಗವಾನ್  ಶ್ರೀರಾಮ ಮಂದಿರದಲ್ಲಿ ಭಾನುವಾರ ಶ್ರೀರಾಮ ನವಮಿ ಶುಭ ಘಳಿಗೆಯಲ್ಲಿ ಬಾಲರಾಮನಿಗೆ ಸೂರ್ಯ ದೇವನು ತಿಲಕವಿರಿಸಿದ ಅಪೂರ್ವ ವಿಧಿ ಸಂಪನ್ನಗೊಂಡಿತು.

ಸೂರ್ಯನ ತೇಜಸ್ವೀ ರಶ್ಮಿಗಳು ಸುಮಾರು ನಾಲ್ಕು ನಿಮಿಷ ಕಾಲ ಶ್ರೀರಾಮನ ವಿಶಾಲ ಹಣೆಯಲ್ಲಿ ರಾರಾಜಿಸಿದವು. ಮಧ್ಯಾಹ್ನ 12.00 ಅಯರಿಂದ ಬಾಲರಾಮನಿಗೆ ಸೂರ್ಯದೇವನ ಈ ವಿಶಿಷ್ಟ ಸೇವೆ ಶುರುವಾಗಿತ್ತು.

ಭಗವಾನ್ ಭಾಸ್ಕರನ ಕಿರಣಗಳು ಬಾಲರಾಮನ ಹಣೆಗೆ ಮುತ್ತಿಕ್ಕುತ್ತಿದ್ದಂತೆ, ಕ್ಷೇತ್ರದಲ್ಲಿ ನೆರೆದಿದ್ದ ಅಪಾರ ಭಕ್ತಸ್ತೋಮ ಖುಷಿಯಿಂದ ನರ್ತಿಸಿದರು. ಭಗವಂತನಿಗೆ ಸಾಷ್ಟಾಂಗ ನಮಸ್ಕರಿಸಿದರು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿಕೆಯಲ್ಲಿ ಬಣ್ಣಿಸಿದೆ.

ಸೂರ್ಯದೇವನು ಬಾಲರಾಮನ ಹಣೆಗೆ ಮುತ್ತಿಟ್ಟು ಆಶೀರ್ವದಿಸುವ ಕ್ಷಣಗಳಿಗಾಗಿ ಶನಿವಾರ ಅಂತಿಮ ಪ್ರಯೋಗ ನಡೆದಿತ್ತು. ಭಾಸ್ಕರನು ಈ ಹಿಂದೆಯೂ ಬಾಲರಾಮನ ಹಣೆಗೆ ಮುತ್ತಿಕ್ಕಿದ್ದನು. ಹಾಗಾಗಿ ಈ ಬಾರಿ ಈ ಅಪೂರ್ವ ವಿಧಿ ಸಂಪನ್ನಗೊಳ್ಳಲು ತೊಡಕಾಗಲಿಲ್ಲ ಎಂದು ಟ್ರಸ್ಟ್ ಹೇಳಿಕೆ ತಿಳಿಸಿದೆ.

 

Related Articles

error: Content is protected !!