Home » ಅಯೋಧ್ಯೆ : ಗೋಪುರಗಳಿಗೆ ಚಿನ್ನದ ಲೇಪನ
 

ಅಯೋಧ್ಯೆ : ಗೋಪುರಗಳಿಗೆ ಚಿನ್ನದ ಲೇಪನ

by Kundapur Xpress
Spread the love

ಅಯೋಧ್ಯೆ : ಇಲ್ಲಿನ ಜನ್ಮಭೂಮಿ ರಾಮಮಂದಿರದಲ್ಲಿ ಗರ್ಭಗೃಹದ ಶಿಖರ ಸಹಿತ ಎಲ್ಲಾ ಗೋಪುರಗಳಿಗೆ ಚಿನ್ನದ ಲೇಪನ ಕಾರ್ಯ ಪ್ರಾರಂಭವಾಗಿದೆ. ಮುಂದಿನ 2-3 ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಈ ಕೆಲಸವನ್ನು ಸಂಪೂರ್ಣವಾಗಿ ನಿಗದಿತ ಕಾರ್ಯವಿಧಾನಗಳು ಮತ್ತು ಸುರಕ್ಷತಾ ಮಾನದಂಡಗಳ ಪ್ರಕಾರ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ನಿಯೋಜಿಸಲಾದ ತಜ್ಞರು ಅಯೋಧ್ಯೆಗೆ ಆಗಮಿಸಿದ್ದು, ಲೇಪನ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದವರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಜನ್ಮಭೂಮಿ ಸಂಕೀರ್ಣದಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯವು ಅಂತಿಮ ಹಂತಕ್ಕೆ ತಲುಪಿದೆ. ನಡೆಯುತ್ತಿರುವ ನಿರ್ಮಾಣ ಕಾರ್ಯಗಳ ವಿಸ್ತ್ರತ ಪರಿಶೀಲನೆ ನಡೆಸಲಾಗುತ್ತಿದೆ. ಮಂದಿರದ ದ್ವಾರ, ಸಭಾಂಗಣ ಮತ್ತು ಅತಿಥಿ ಗೃಹದ ಕಾಮಗಾರಿಯು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು

 

Related Articles

error: Content is protected !!