Home » ಜೈಷ್‌ ಮುಖ್ಯಸ್ಥ ಅಜರ್‌ನ 10 ನೆಂಟರು ಬಲಿ
 

ಜೈಷ್‌ ಮುಖ್ಯಸ್ಥ ಅಜರ್‌ನ 10 ನೆಂಟರು ಬಲಿ

by Kundapur Xpress
Spread the love

ಲಾಹೋ‌ರ್ : 1999ರಲ್ಲಿ ತನ್ನ ಕಾರ್ಯಕರ್ತರ ಮೂಲಕ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಿಸಿ, ಬಳಿಕ ವಿಮಾನ ದಲ್ಲಿನ ಪ್ರಯಾಣಿಕರ ಬಿಡುಗಡೆಗೆ ಬದಲಾಗಿ ಭಾರತದ ಜೈಲಿಂದ ಬಿಡುಗಡೆಯಾಗಿದ್ದ ಜೈಷ್ ನಾಯಕ ಅಜರ್ ಮಸೂದ್‌ಗೆ ಭಾರತೀಯ ಸೇನೆ ಭರ್ಜರಿ ಪೆಟ್ಟು ನೀಡಿದೆ

ಪಾಕ್ ಆಕ್ರಮಿತ ಕಾಶ್ಮೀರದ ಬಹಾವಲ್ಪುರದಲ್ಲಿನ ಮರ್ಕಜ್ ಸುಭಾನ್‌ ಉಗ್ರರ ಕ್ಯಾಂಪ್ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಅಜರ್ ಮಸೂದ್‌ನ ಕುಟುಂಬದ 10 ಸದಸ್ಯರು ಮತ್ತು ಇತರೆ 4 ಆಪ್ತರು ಸಾವನ್ನಪ್ಪಿದ್ದಾರೆ. ಇದು ಉಗ್ರನಿಗೆ ಬಿದ್ದ ಭಾರೀ ಪೆಟ್ಟು ಎಂದು ಬಣ್ಣಿಸಲಾಗಿದೆ. ಮರ್ಕಜ್ ಸುಭಾನ್, ಜೈಷ್ ಮೊಹಮ್ಮದ್ ಸಂಘಟನೆಯಕೇಂದ್ರ ಕಚೇರಿಯಾಗಿದ್ದು, ಇಲ್ಲೇ ಉಗ್ರರ ನೇಮಕ, ತರಬೇತಿ ನೀಡಲಾಗುತ್ತಿತ್ತು

 

Related Articles

error: Content is protected !!