Home » ವೀಸಾ ಗಡುವು ಅಂತ್ಯ : 537 ಪಾಕಿಗಳು ತವರಿಗೆ
 

ವೀಸಾ ಗಡುವು ಅಂತ್ಯ : 537 ಪಾಕಿಗಳು ತವರಿಗೆ

by Kundapur Xpress
Spread the love

ನವದೆಹಲಿ : ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ತನ್ನ ನೆಲದಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳಿಗೆ ತಮ್ಮ ತಾಯ್ನಾಡಿಗೆ ಮರಳಲು ಆದೇಶಿಸಿದ್ದ ಗಡುವು ಏ.27ರ ಭಾನುವಾರಕ್ಕೆ ಅಂತ್ಯವಾಗಿದೆ. ಈ ಗಡುವಿನೊಳಗೆ 9 ರಾಜತಾಂತ್ರಿಕರು, ಅಧಿಕಾರಿಗಳು ಸೇರಿದಂತೆ 537 ಮಂದಿ ಅಟ್ಟಾರಿ ಗಡಿ ಮೂಲಕ ಕಳೆದ 4 ದಿನದಲ್ಲಿ ಪಾಕಿಸ್ತಾನಕ್ಕೆ ಮರಳಿದ್ದಾರೆ.

ಅಟ್ಟಾರಿ ಗಡಿ ಮೂಲಕ ಭಾನುವಾರ 237, ಶನಿವಾರ 81, ಶುಕ್ರವಾರ 191, ಗುರುವಾರ 28 ಪಾಕ್ ಪ್ರಜೆಗಳು ಭಾರತ ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತ ಭಾರತದಿಂದ ಪಾಕಿಸ್ತಾನಕ್ಕೆ ನೇರ ವಿಮಾನ ಸಂಚಾರ ಇರದ ಹಿನ್ನೆಲೆಯಲ್ಲಿ ಕೆಲವರು ಅನ್ಯ ದೇಶಗಳ ಮಾರ್ಗವಾಗಿ ಹೋಗಿರುವ ಸಾಧ್ಯತೆಯೂ ಇದೆ.

ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟ ಬೆನ್ನಲ್ಲೇ, ಸಾರ್ಕ್ ಸೇರಿ ಅಲಾವಧಿ ವೀಸಾ ಹೊಂದಿರುವ ಎಲ್ಲಾ ಪಾಕಿಸ್ತಾನಿಯರಿಗೆ ಭಾರತ ತೊರೆಯಲು ಸರ್ಕಾರ ಆದೇಶಿಸುತ್ತು. ಜೊತೆಗೆ, ತಮ್ಮ ರಾಜ್ಯದಲ್ಲಿ ಯಾವೊಬ್ಬ ಪಾಕ್ ಪ್ರಜೆಯೂ ಉಳಿಯದಂತೆ ನೋಡಿಕೊಳ್ಳಲು ಎಲ್ಲಾ ಸಿಎಂಗಳಿಗೆ. ಸೂಚಿಸಲಾಗಿತ್ತು. ಆದರೆ ದೀರ್ಘಾವಧಿ, ರಾಜತಾಂತ್ರಿಕ ಅಥವಾ ಅಧಿಕೃತ ವೀಸಾ ಹೊಂದಿರುವವರಿಗೆ ಮಾತ್ರ ಇದರಿಂದ ವಿಮಾಯಿತಿ ನೀಡಲಾಗಿದೆ. 850 ಮಂದಿ ಭಾರತೀಯರು ಕೂಡ 4 ದಿನಗಳಲ್ಲಿ ತಾಯ್ಕಾಡಿಗೆ ಮರಳಿದ್ದಾರೆ 

 

Related Articles

error: Content is protected !!