ಢಾಕಾ : ಉತ್ತರ ಬಾಂಗ್ಲಾದೇಶದ ಸುನಮ್ ಗಂಜ್ ಜಿಲ್ಲೆಯಲ್ಲಿನ ಹಿಂದು ಸಮುದಾಯದ ಮನೆಗಳು, ಅಂಗಡಿಗಳು ಮತ್ತು ಸ್ಥಳೀಯ ಲೋಕನಾಥ ದೇವಸ್ಥಾನವನ್ನು ಧ್ವಂಸಗೊಳಿಸಿ ಹಾನಿ ಮಾಡಿದ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಶನಿವಾರ బంధిಸಿದ್ದಾರೆ.
ಪೊಲೀಸರು 150-170 ಜನರ ವಿರುದ್ದ ಪ್ರಕರಣ ದಾಖಲಿಸಿದ್ದು ಅವರಲ್ಲಿ 12 ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ.ಈ ತಿಂಗಳ ಆರಂಭದಲ್ಲಿ ಸುನಮ್ ಗಂಜ್ ಜಿಲ್ಲೆಯ ದೋರಾಬಜಾರ್ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯಕ್ಕಾಗಿ ಅಲಿಮ್ ಹುಸೇನ್(19), ಸುಲ್ತಾನ್ ಅಹ್ಮದ್ ರಾಜು(20), ಇಮ್ರಾನ್ ಹುಸೇನ್ (31) ಮತ್ತು ಶಾಜಹಾನ್ ಹುಸೇನ್ (20) ಎಂಬವರನ್ನು ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರ ಪತ್ರಿಕಾ ವಿಭಾಗ ತಿಳಿಸಿದೆ.