ಢಾಕಾ : ಬಾಂಗ್ಲಾದೇಶದಲ್ಲಿ ಹಿಂದುಗಳು ಮತ್ತು ದೇವಸ್ಥಾನಗಳ ಮೇಲೆ ದಾಳಿ ಮುಂದುವರಿದಿದ್ದು ದುಷ್ಕರ್ಮಿಗಳು ಶನಿವಾರ ಇಸ್ಕಾನ್ ಕೇಂದ್ರಕ್ಕೆ ಬೆಂಕಿ ಇಟ್ಟಿದ್ದಾರೆ. ದುಷ್ಕರ್ಮಿಗಳು ದೇವಾಲಯದ ಹಿಂಭಾಗದಲ್ಲಿರುವ ತಗಡಿನ ಛಾವಣಿಯನ್ನು ಎತ್ತಿ ಬೆಂಕಿ ಹಚ್ಚಲು ಪೆಟ್ರೋಲ್ ಅಥವಾ ಆಕ್ಷೇನ್ ಬಳಸಿದ್ದಾರೆ.
ಬಾಂಗ್ಲಾದೇಶದಲ್ಲಿ ಇಸ್ಕಾನ್ ನಮ್ಬಟ್ಟಾ ಕೇಂದ್ರವನ್ನು ಸುಟ್ಟು ಹಾಕಲಾಗಿದೆ. ಶ್ರೀ ಲಕ್ಷ್ಮಿ ನಾರಾಯಣರ ದೇವತೆಗಳು ಮತ್ತು ದೇವಾಲಯದೊಳಗಿನ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಢಾಕಾ ಜಿಲ್ಲೆಯಲ್ಲಿರುವ ತನ್ನ ಕೇಂದ್ರವನ್ನು ಶನಿವಾರ ಮುಂಜಾನೆ ಸುಟ್ಟುಹಾಕಲಾಗಿದೆ ಎಂದು ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಕಾನ್ಶಿಯಸ್‌ನೆಸ್ (ಇಸ್ಕಾನ್) ಹೇಳಿದೆ.
ಇಸ್ಕಾನ್ ಕೋಲ್ಕತಾ ಉಪಾಧ್ಯಕ್ಷ ರಾಧಾರಾಮ್ ದಾಸ್ ಮಾತನಾಡಿ, ಸಮುದಾಯದ ಸದಸ್ಯರು ಮತ್ತು ವೈಷ್ಣವ ಪಂಥದ ಸದಸ್ಯರ ಮೇಲೆ ಉದ್ದೇಶಿತ ದಾಳಿ ಅಡೆತಡೆಯಿಲ್ಲದೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ