ಕೋಲ್ಕತಾ : ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ಮುಂದುವರೆದಿದ್ದು ಇದೀಗ ರಾಜಧಾನಿ ಢಾಕಾದಿಂದ 200 ಕಿ.ಮೀ. ದೂರದ ನಟೋರ್ ಎಂಬಲ್ಲಿ ಇಸ್ಲಾಂ ಮೂಲ ಭೂತವಾದಿಗಳು ಅರ್ಚಕರೊಬ್ಬರನ್ನು ಭೀಕರ ವಾಗಿ ಹತ್ಯೆ ಮಾಡಿದ್ದಾರೆ ಘಟನೆಯನ್ನು ಕೋಲ್ಕತಾದಲ್ಲಿನ ಇಸ್ಕಾನ್ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಸಾವಿರಾರು ದೌರ್ಜನ್ಯ ಪ್ರಕರಣದ ಹೊರತಾಗಿಯೂ ಈ ಕುರಿತು ಅಂತಾರಾಷ್ಟ್ರೀಯ ಸಮುದಾಯದ ಮೌನಕ್ಕೆ ಶರಣಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ
ಭೀಕರ ಹತ್ಯೆ:
ನಟೋರ್ ನಗರದ ಸ್ಮಶಾನವೊಂದರ ದೇಗುಲದಲ್ಲಿ ಅರ್ಚಕರಾಗಿದ್ದ ತರುಣ್ ಚಂದ್ರದಾಸ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ದೇಗುಲದ ಆವರಣದಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ದಾಸ್ ಅವರ ಶವ ಪತ್ತೆಯಾಗಿದೆ. ಜೊತೆಗೆ ದೇಗುಲದಲ್ಲಿನ ಹುಂಡಿ ಒಡೆದು ಹಣ ದೋಚಲಾಗಿದೆ.